ಐಪಿಎಲ್ 2022 ರ 24 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತಂಡಕ್ಕೆ ಅಗತ್ಯ ಇನ್ನಿಂಗ್ಸ್ ಕಟ್ಟಿದರು. ಹಾರ್ದಿಕ್ 52 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 8 ಬೌಂಡರಿಗಳ ಸಹಾಯದಿಂದ ಅಜೇಯ 87 ರನ್ ಗಳಿಸಿದರು. ಇದು ಅವರ ಐಪಿಎಲ್ ವೃತ್ತಿಜೀವನದ ಎರಡನೇ ಅತ್ಯಧಿಕ ಇನ್ನಿಂಗ್ಸ್. ಇದಲ್ಲದೇ, ರಾಜಸ್ಥಾನ್ ರಾಯಲ್ಸ್ ವಿರುದ್ಧ ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಅತಿದೊಡ್ಡ ಇನ್ನಿಂಗ್ಸ್. ಹಾರ್ದಿಕ್ ಮೊದಲ ಇನಿಂಗ್ಸ್ನ 20 ನೇ ಓವರ್ನಲ್ಲಿ ಸಿಕ್ಸರ್ ಕೂಡ ಬಾರಿಸಿದರು. ಈ ಸಿಕ್ಸರ್ನೊಂದಿಗೆ ಅವರು ಐಪಿಎಲ್ನಲ್ಲಿ 20ನೇ ಓವರ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ತಲುಪಿದರು.
ರಾಜಸ್ಥಾನ ವಿರುದ್ಧದ ಈ ಪಂದ್ಯದ ಕೊನೆಯ ಅಂದರೆ 20ನೇ ಓವರ್ನಲ್ಲಿ ಹಾರ್ದಿಕ್ ಪಾಂಡ್ಯ ಸಿಕ್ಸರ್ ಬಾರಿಸಿದ್ದು 24ನೇ ಸಿಕ್ಸರ್ ಆಗಿತ್ತು. ಈಗ ಈ ಲೀಗ್ನ 20 ನೇ ಓವರ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಲೆಕ್ಕಾಚಾರದಲ್ಲಿ ಇವರು ಬಡ್ತಿ ಪಡೆದಿದ್ದಾರೆ. ಈ ಲೀಗ್ನ 20 ನೇ ಓವರ್ನಲ್ಲಿ ಇದುವರೆಗೆ 23-23 ಸಿಕ್ಸರ್ಗಳನ್ನು ಬಾರಿಸಿರುವ ರವೀಂದ್ರ ಜಡೇಜಾ ಮತ್ತು ರೋಹಿತ್ ಶರ್ಮಾ ಅವರನ್ನು ಪಾಂಡ್ಯ ಹಿಂದೆ ಹಾಕಿದ್ದಾರೆ. ಐಪಿಎಲ್ನಲ್ಲಿ 20ನೇ ಓವರ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ದಾಖಲೆಯನ್ನು ಧೋನಿ ಹೊಂದಿದ್ದಾರೆ. ಅವರು 50 ಸಿಕ್ಸರ್ಗಳನ್ನು ಬಾರಿಸಿದ್ದಾರೆ, ಆದರೆ ಕೀರಾನ್ ಪೊಲಾರ್ಡ್ 33 ಸಿಕ್ಸರ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ನ 20ನೇ ಓವರ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿದ ಟಾಪ್ 5 ಬ್ಯಾಟ್ಸ್ಮನ್ಗಳು
50 ಸಿಕ್ಸರ್ಗಳು – ಎಂಎಸ್ ಧೋನಿ
33 ಸಿಕ್ಸರ್ಗಳು – ಕೀರಾನ್ ಪೊಲಾರ್ಡ್
24 ಸಿಕ್ಸರ್ – ಹಾರ್ದಿಕ್ ಪಾಂಡ್ಯ
23 ಸಿಕ್ಸರ್ಗಳು – ರವೀಂದ್ರ ಜಡೇಜಾ
23 ಸಿಕ್ಸರ್ಗಳು – ರೋಹಿತ್ ಶರ್ಮಾ