ಪಾಕಿಸ್ತಾನ ತಂಡವು ತವರಿನಲ್ಲಿ ಐತಿಹಾಸಿಕ ಟೆಸ್ಟ್ ಸರಣಿಗೆ ಸಿದ್ಧವಾಗಿದೆ. ಮಾರ್ಚ್ 4ರಿಂದ ರಾವಲ್ಪಿಂಡಿಯಲ್ಲಿ ಆರಂಭವಾಗಲಿರುವ ಈ ಸರಣಿ ಆಸ್ಟ್ರೇಲಿಯಾ-ಪಾಕ್ ತಂಡಗಳಿಗೂ ವಿಶೇಷವಾಗಿದೆ. ಆದರೆ, ಈ ಟೆಸ್ಟ್ ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನ ತಂಡ ಪೆಟ್ಟು ಬಿದ್ದಿದೆ. ತಂಡದ ವೇಗದ ಬೌಲರ್ ಹಸನ್ ಅಲಿ ಮತ್ತು ಆಲ್ರೌಂಡರ್ ಫಹೀಮ್ ಅಶ್ರಫ್ ಮೊದಲ ಟೆಸ್ಟ್ನಲ್ಲಿ ಆಡುವುದು ಅನುಮಾನಾವಾಗಿದೆ.
ಈ ಇಬ್ಬರೂ ಆಟಗಾರರ ಫಿಟ್ನೆಸ್ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ ಕಳವಳ ವ್ಯಕ್ತಪಡಿಸಿದೆ. ಮೊಹಮ್ಮದ್ ನವಾಜ್ ಈಗಾಗಲೇ ಕಾಲಿನ ಗಾಯದಿಂದಾಗಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ವರದಿಯ ಪ್ರಕಾರ, ಈ ಇಬ್ಬರೂ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಗಾಯಗೊಂಡು ಗಾಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಇದರಿಂದಾಗಿ ಅವರು ಆಡುವ ಬಗ್ಗೆ ಅನುಮಾನವಿದೆ.
ಬೆನ್ನುನೋವಿನಿಂದ ಬಳಲುತ್ತಿರುವ ಹಸನ್ ತಂಡದಲ್ಲಿ ಪುನರಾಗಮನ ಮಾಡಿದರೂ ಅವರ ಪ್ರದರ್ಶನ ಉತ್ತಮವಾಗಿಲ್ಲ. ಇದೇ ಸಮಯದಲ್ಲಿ, ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಎಲಿಮಿನೇಟರ್ನಲ್ಲಿ ಪೇಶಾವರ್ ಝಲ್ಮಿ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡ ನಂತರ ಫಹೀಮ್ ಅಶ್ರಫ್ ಆಡಲಿಲ್ಲ.
ಮುಂದಿನ 2-3 ದಿನಗಳಲ್ಲಿ ಈ ಇಬ್ಬರು ಆಟಗಾರರು ಫಿಟ್ ಆಗದಿದ್ದರೆ ಇಡೀ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ತಂಡದ ಆಡಳಿತ ಮಂಡಳಿ ಆತಂಕ ವ್ಯಕ್ತಪಡಿಸಿದೆ.