Zaheer Abbas – ಐಸಿಯು ನಲ್ಲಿ ಪಾಕ್ ಕ್ರಿಕೆಟ್ ದಿಗ್ಗಜ.. ಝಹೀರ್ ಅಬ್ಬಾಸ್ ಗೆ ಕೋವಿಡ್ ಸೋಂಕು..!

ಪಾಕಿಸ್ತಾನದ ಕ್ರಿಕೆಟ್ ದಿಗ್ಗಜ ಝಹೀರ್ ಅಬ್ಬಾಸ್ ಅವರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದಾರೆ. ಅಲ್ಲದೆ ಲಂಡನ್ ನ ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. Pakistan legend Zaheer Abbas in ICU after testing COVID positive
74ರ ಹರೆಯದ ಝಹೀರ್ ಅಬ್ಬಾಸ್ ಅವರು ಕಳೆದ ಮೂರು ದಿನಗಳಿಂದ ಲಂಡನ್ ನ ಸೇಂಟ್ ಮೇರಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಝಹೀರ್ ಅಬ್ಬಾಸ್ ಅವರು ದುಬೈನಿಂದ ಲಂಡನ್ ಗೆ ಪ್ರಯಾಣ ಬೆಳೆಸುತ್ತಿದ್ದರು.
ಝಹೀರ್ ಅಬ್ಬಾಸ್ ಅವರು ಪಾಕ್ ಕ್ರಿಕೆಟ್ ಕಂಡ ಅಪ್ರತಿಮ ಆಟಗಾರ. 1969ರಲ್ಲಿ ಝಹೀರ್ ಅಬ್ಬಾಸ್ ಅವರು ನ್ಯೂಜಿಲೆಂಡ್ ವಿರುದ್ದ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಅಡಿದ್ದರು. 72 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಬ್ಬಾಸ್ ಅವರು 5062 ರನ್ ದಾಖಲಿಸಿದ್ದಾರೆ. ಹಾಗೇ 62 ಏಕದಿನ ಪಂದ್ಯಗಳಲ್ಲಿ 2572 ರನ್ ಗಳಿಸಿದ್ದಾರೆ.

ಇನ್ನು ಪ್ರಥಮ ದರ್ಜೆಯ ಕ್ರಿಕೆಟ್ ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. 459 ಪ್ರಥಮ ದರ್ಜೆಯ ಪಂದ್ಯಗಳಲ್ಲಿ 34843 ರನ್ ಸಿಡಿಸಿದ್ದಾರೆ. ಇದರಲ್ಲಿ 108 ಶತಕ ಹಾಗೂ 158 ಅರ್ಧಶತಕಗಳಿವೆ.
ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ನಂತರ ಝಹೀರ್ ಅಬ್ಬಾಸ್ ಅವರು ಮ್ಯಾಚ್ ರೆಫ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಒಂದು ಟೆಸ್ಟ್ ಪಂದ್ಯ ಮತ್ತು ಮೂರು ಏಕದಿನ ಪಂದ್ಯಗಳಿಗೆ ಮ್ಯಾಚ್ ರೆಫ್ರಿಯಾಗಿದ್ದರು.
ಇನ್ನು 2020ರಲ್ಲಿ ಝಹೀರ್ ಅಬ್ಬಾಸ್ ಅವರು ಐಸಿಸಿ ಹಾಲ್ ಆಫ್ ಫೇಮ್ ಗೌರವವನ್ನು ಪಡೆದುಕೊಂಡಿದ್ದರು.
ಝಹೀರ್ ಅಬ್ಬಾಸ್ ಅವರು ಶೀಘ್ರ ಗುಣಮುಖರಾಗಲಿ ಎಂದು ಕ್ರಿಕೆಟ್ ಜಗತ್ತು ಹಾರೈಸುತ್ತಿದೆ.