ಸಂಘಟಿತ ಆಟದ ಪ್ರದರ್ಶನ ನೀಡಿದ ಪ್ರವಾಸಿ ನ್ಯೂಜಿಲೆಂಡ್ (New Zealand) 2 ವಿಕೆಟ್ ಗಳಿಂದ ಪಾಕಿಸ್ತಾನ (Pakistan) ತಂಡವನ್ನು ಮೂರನೇ ಏಕದಿನ ಪಂದ್ಯದಲ್ಲಿ ಮಣಿಸಿ, ಮೂರು ಪಂದ್ಯಗಳ ಸರಣಿಯನ್ನು 2-1ರಿಂದ ವಶಕ್ಕೆ ಪಡೆಸಿಕೊಂಡಿಸಿದೆ.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ನಿಗದಿತ ಓವರ್ ಗಳಲ್ಲಿ 9 ವಿಕೆಟ್ಗೆ 280 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ನ್ಯೂಜಿಲೆಂಡ್ 48.1 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 281 ರನ್ ಸೇರಿಸಿತು.
ಪಾಕಿಸ್ತಾನ 21 ರನ್ ಗಳಿಗೆ ಎರಡು ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿತ್ತು. ತಂಡದ ಪರ ಮೂರನೇ ವಿಕೆಟ್ ಗೆ ಫಾಖರ್ ಜಮನ್ ಹಾಗೂ ಮೊಹಮ್ಮದ್ ರಿಜ್ವಾನ್ ಭರ್ಜರಿ ಜೊತೆಯಾಟವನ್ನು ನೀಡಿದರು. ಈ ಜೋಡಿ 161 ಎಸೆತಗಳಲ್ಲಿ 154 ರನ್ ಸೇರಿಸಿತು. ಆರಂಭಿಕ ಫಖಾರ್ ಜಮನ್ 122 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ನೆರವಿನಿಂದ 101 ರನ್ ಸೇರಿಸಿದ್ರು.
ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ 6 ಬೌಂಡರಿ ನೆರವಿನಿಂದ 77 ರನ್ ಸಿಡಿಸಿದರು. ಹ್ಯಾರೀಸ್ ಸೋಹಿಲ್ 22, ಆಘಾ ಸಲ್ಮಾನ್ 45 ರನ್ ಕಲೆ ಹಾಕಿದರು. ಉಳಿದ ಬ್ಯಾಟರ್ ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.
ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡದ ಆರಂಭಿರಾದ ಫಿನ್ ಅಲೇನ್ (25), ಡ್ವೇನ್ ಕಾನ್ವೆ ಜೋಡಿ ಸಾಧರಣ ಜೊತೆಯಾಟವನ್ನು ನೀಡಿತು. ಎರಡನೇ ವಿಕೆಟ್ಗೆ ಕಾನ್ವೆ ಮತ್ತು ಕೇನ್ ವಿಲಿಯಮ್ಸನ್ ಜೋಡಿ 73 ಎಸೆತಗಳಲ್ಲಿ 65 ರನ್ ಸೇರಿಸಿತು. ಡ್ವೇನ್ 52 ರನ್ ಬಾರಿಸಿದರೆ, ಕೇನ್ ವಿಲಿಯಮ್ಸನ್ 53 ರನ್ ಬಾರಿಸಿದರು.
ಕಿವೀಸ್ ಗ್ಲೇನ್ ಫಿಲಿಪ್ಸ್ ಅಜೇಯ 63 ರನ್ ಬಾರಿಸಿ ಜಯದಲ್ಲಿ ಮಿಂಚಿದರು.
PAK VS NZ, Pakistan, New Zealand, ODI Series