ಉಸ್ಮಾನ್ ಖವಾಜ(160) ಭರ್ಜರಿ ಶತಕ ಹಾಗೂ ಬ್ಯಾಟ್ಸಮನ್ಗಳ ಜವಾಬ್ದಾರಿಯುತ ಆಟದ ನೆರವಿನಿಂದ ಪಾಕಿಸ್ತಾನ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 556 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ.
ಕರಾಚಿಯಲ್ಲಿ ನಡೆಯುತ್ತಿರುವ ಪಂದ್ಯದ ಎರಡು ದಿನದಾಟದಲ್ಲೂ ಪ್ರಾಬಲ್ಯ ಮೆರೆದ ಆಸ್ಟ್ರೇಲಿಯಾ 3ನೇ ದಿನದಂದು ತನ್ನ ಮ್ಯಾರಥಾನ್ ಇನ್ನಿಂಗ್ಸ್ಗೆ ವಿರಾಮ ಹಾಡಿತು. ಆ ಮೂಲಕ 189 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 556 ರನ್ಗಳಿಸಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ. 3ನೇ ದಿನದಾಟ ಆರಂಭಿಸಿದ ಪ್ಯಾಟ್ ಕಮ್ಮಿನ್ಸ್(34*) ಹಾಗೂ ಮಿಚೆಲ್ ಸ್ವೀಪ್ಸನ್(15*) 10ನೇ ವಿಕೆಟ್ಗೆ ಮುರಿಯದ 51 ರನ್ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.
ಪಾಕಿಸ್ತಾನ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಆಸ್ಟ್ರೇಲಿಯಾ ಪರ ಆರಂಭಿಕ ಬ್ಯಾಟ್ಸಮನ್ ಉಸ್ಮಾನ್ ಖವಾಜ(160) ಅಮೋಘ ಶತಕ ಸಿಡಿಸಿ ಮಿಂಚಿದರೆ. ಅಲೆಕ್ಸ್ ಕ್ಯಾರಿ(93) ರನ್ಗಳಿಸಿ ಶತಕ ವಂಚಿತರಾದರು. ಉಳಿದಂತೆ ಸ್ಟೀವ್ ಸ್ಮಿತ್(72), ನಾಥನ್ ಲಿಯಾನ್(38) ಹಾಗೂ ಡೇವಿಡ್ ವಾರ್ನರ್(36) ರನ್ಗಳಿಸಿ ತಂಡಕ್ಕೆ ಆಸರೆಯಾದರು.
ಪಾಕಿಸ್ತಾನದ ಪರ ಫಹೀಮ್ ಅಶ್ರಫ್ ಹಾಗೂ ಸಜಿದ್ ಖಾನ್ ತಲಾ 2 ವಿಕೆಟ್ ಪಡೆದರೆ. ಶಹೀನ್ ಅಫ್ರೀದಿ, ಹಸನ್ ಅಲಿ, ನುಮಾನ್ ಅಲಿ ಹಾಗೂ ಬಾಬರ್ ಆಜಂ ತಲಾ 1 ವಿಕೆಟ್ ಪಡೆದರು.