Pak Loose Zim–ವಿರೋಚಿತ ಸೋಲು ಅನುಭವಿಸಿದ ಪಾಕಿಸ್ತಾನ ತಂಡವನ್ನು ಕಾಲೆಳೆದು ಟ್ವೀಟ್ ಮಾಡಿದ್ದ ಜಿಂಬಾಬ್ವೆ ಅಧ್ಯಕ್ಷ ಎಮರ್ಸನ್ ದಂಬುಡ್ಜೊಮ್ನಘಿಂಗಾಗ್ವಾ ಅವರಿಗೆ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ತಿರುಗೇಟು ನೀಡಿದ್ದಾರೆ.
ಗುರುವಾರ ಸೂಪರ್ 12ರಲ್ಲಿ ಪಾಕಿಸ್ತಾನ ವಿರುದ್ಧ ಜಿಂಬಾಬ್ವೆ ತಂಡ 1ರನ್ ಅಂತರದಿಂದ ರೋಚಕ ಗೆಲುವು ದಾಖಲಿಸಿತ್ತು. ಈ ಪಂದ್ಯಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಫ್ರಾಡ್ ಪಾಕ್ ಮಿಸ್ಟರ್ ಬಿನ್ ವಿಚಾರ ಟ್ರೆಂಡ್ ಅಗಿತ್ತು.
2016ರಲ್ಲಿ ಪಾಕಿಸ್ತಾನದ ಹಾಸ್ಯ ನಟ ಆಸಿಫ್ ಮೊಹಮ್ಮದ್ ಹರಾರೆಯಲ್ಲಿ ಮಿಸ್ಟರ್ ಬೀನ್ ಹೆಸರಿನಲ್ಲಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.
ಕಾರ್ಯಕ್ರಮ ನೀರಾಸ ಅಂತ್ಯ ಕಂಡಿತ್ತು. ನಮ್ಮ ಹಣ ವ್ಯರ್ಥವಾಗಿದೆ ಎಂದು ಜಿಂಬಾಬ್ವೆ ಜನ ಅಂದು ದೂರಿದ್ದರು. ಪಂದ್ಯಕ್ಕೂ ಮುನ್ನ ಉಭಯ ದೇಶದ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದರು.
ಪಂದ್ಯ ಮುಗಿದ ಬಳಿಕ ಜಿಂಬಾಬ್ವೆ ಕ್ರಿಕೆಟ್ ಅಭಿಮಾನಿಗಳು ಮಿಸ್ಟರ್ ಬೀನ್ ವಿಚಾರವನ್ನು ಪ್ರಸ್ತಾಪಿಸಿ ಪಾಕ್ ವಿರುದ್ಧ ಸೇಡು ತೀರಿಸಿಕೊಂಡಿದ್ದೇವೆ ಎಂದು ಪೋಸ್ಟ್ ಮಾಡಿದರು.
ಇದಕ್ಕೆ ದನಿಗೂಡಿಸಿದ ಜಿಂಬಾಬ್ವೆ ಅಧ್ಯಕ್ಷ ಎಮರ್ಸನ್, ಜಿಂಬಾಬ್ವೆ ಎಂಥ ಗೆಲುವು. ಆಟಗಾರರಿಗೆ ಅಭಿನಂದನೆಗಳು. ಹಾಗೆಯೆ ಮುಂದಿನ ಬಾರಿ, ನಿಜವಾದ ಮಿಸ್ಟರ್ ಬೀನ್ ಅನ್ನು ಕಳಿಸಿ ಎಂದು ಪಾಕ್ಗೆ ಟ್ವೀಟ್ ಮಾಡಿದರು.
ಈ ಟ್ವೀಟ್ ನೋಡಿ ಕೆರಳಿದ ಖಂಡಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, ನಮ್ಮಿಲ್ಲಿ ಮಿಸ್ಟರ್ ಬೀನ್ ಇಲ್ಲದಿರಬಹುದು. ಆದರೆ ನಿಜವಾದ ಕ್ರೀಡಾಸೂರ್ತಿ ನಮ್ಮಲ್ಲಿದೆ.
ನಾವು ಪಾಕಿಸ್ತಾನಿಯರು ಪುಟಿದೇಳುವ ಹವ್ಯಾಸವಿದೆ. ಮಿಸ್ಟರ್ ಪ್ರೆಸಿಡೆಂಟ್, ಅಭಿನಂದನೆಗಳು.ನಿಮ್ಮ ತಂಡ ನಿಜವಾಗಿಯೂ ಚೆನ್ನಾಗಿ ಆಡಿದೆ ಎಂದು ಬರೆದಿದ್ದಾರೆ.