Pak Beat Bangla ಶಾಹೀನ್ ಶಾ ಅಫ್ರೀದಿ ಅವರ ಅಮೋಘ ಬೌಲಿಂಗ್ ದಾಳಿಯ ನೆರವಿನಿಂದ ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಪಾಕ್ ಸೆಮಿಫೈನಲ್ ತಲುಪಿದೆ.
ಅಡಿಲೇಡ್ ಮೈದಾನದಲ್ಲಿ ನಡೆದ ಗ್ರೂಪ್ 2ರ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 127 ರನ್ ಕಲೆ ಹಾಕಿತು. ಪಾಕಿಸ್ತಾನ ತಂಡ 18.1 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿತು.
ಬಾಂಗ್ಲಾ ತಂಡಕ್ಕೆ ಪಾಕ್ ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿ ಆಘಾತ ನೀಡಿದರು. ಲಿಟನ್ ದಾಸ್ 10, ಮೊಸೆಡೆಕ್ ಹೋಸೆನ್ 5 ರನ್, ನುರುಲ್ ಹಸನ್, ತಸ್ಕಿನ್ ಅಹ್ಮದ್ 1 ಅವರುಗಳ ವಿಕೆಟ್ ಪಡೆದು ಬಾಂಗ್ಲಾ ತಂಡದ ಹೆಡೆಮುರಿ ಕಟ್ಟಿದರು. ಓಪನರ್ ನಜ್ಮುಲ್ ಶಾಂಟೊ 54 ರನ್ (48 ಎಸೆತ, 7 ಬೌಂಡರಿ),ನಾಯಕ ಶಕೀಬ್ ಅಲ್ ಹಸನ್ 0, ನಸುಮ್ ಅಹ್ಮದ್ 7 ರನ್ ಗಳಿಸಿದರು.
ಪಾಕ್ ಪರ ಶಾಹೀನ್ ಶಾ ಅಫ್ರೀದಿ 22ಕ್ಕೆ 4, ಶಾದಾಬ್ ಖಾನ್ 30ಕ್ಕೆ 2, ಹ್ಯಾರಿಸ್ ರೌಫ್ 21ಕ್ಕೆ 1, ಇಫ್ತಿಕರ್ ಅಹ್ಮದ್ 15ಕ್ಕೆ 1 ವಿಕೆಟ್ ಪಡೆದರು.
128 ರನ್ ಗುರಿ ಬೆನ್ನತ್ತಿದ ಪಾಕ್ ಪರ ಮೊಹ್ಮದ್ ರಿಜ್ವಾನ್ (32 ರನ್) ಹಾಗೂ ನಾಯಕ ಬಾಬರ್ ಅಜಂ (25ರನ್) ಮೊದಲ ವಿಕೆಟ್ಗೆ 57 ರನ್ ಸೇರಿಸಿದರು. ಮೊಹ್ಮದ್ ನವಾಜ್ 4, ಮೊಹ್ಮದ್ ಹ್ಯಾರಿಸ್ 31, ಶಾನ್ ಮಸೂದ್ 24, ಇಫ್ತಿಕರ್ ಅಹ್ಮದ್ 1 ರನ್ ಗಳಿಸಿದರು.
ಬಾಂಗ್ಲಾ ಪರ ನಾಸುಮ್ ಅಹ್ಮದ್ 14ಕ್ಕೆ 1,ಮುಸ್ತಾಫಿಜುರ್ ರೆಹಮಾನ್ 21ಕ್ಕೆ 1, ಎಬಡೊಟ್ ಹೊಸೇನ್ 25ಕ್ಕೆ 1,ಶಕೀಬ್ ಅಲ ಹಸನ್ 35ಕ್ಕೆ 1 ವಿಕೆಟ್ ಪಡೆದರು.