ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಆರಂಭವಾಗಿದೆ. ಟೀಮ್ ಇಂಡಿಯಾ ನಾಯಕ ಗಾಯಗೊಂಡಿರುವ ಕಾರಣದಿಂದ ಅನಿವಾರ್ಯವಾಗಿ ಹಲವು ಬದಲಾವಣೆ ಮಾಡಿದೆ. ಆದರೆ ಓಪನರ್ಗಳ ಬಗ್ಗೆ ಮಾಡಿದ ನಿರ್ಧಾರಗಳು ವೈಫಲ್ಯ ಕಂಡಿವೆ.
ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಅನುಪಸ್ಥಿತಿಯಲ್ಲಿ ಹೊಸ ಆರಂಭಿಕರನ್ನು ಕಣಕ್ಕಿಳಿಸಬೇಕಾದ ಅನಿವಾರ್ಯತೆ ಎದುರಿಸಿತ್ತು. ಮಯಾಂಕ್ ಅಗರ್ವಾಲ್ ತಂಡದಲ್ಲಿದ್ದರೂ ಎಕ್ಸ್ಟ್ ಟ್ರಾ ಬ್ಯಾಟರ್ಗೆ ಅವಕಾಶ ನೀಡಬೇಕಾಗಿದ್ದರಿಂದ ಚೇತೇಶ್ವರ ಪೂಜಾರಾ ಅವರನ್ನು ಮೇಕ್ ಶಿಫ್ಟ್ಓಪನರ್ ಆಗಿ ಭಡ್ತಿ ನೀಡಿತ್ತು. ಆದರೆ ಈ ಪ್ರಯೋಗ ಭಾರತದ ಕೈ ಹಿಡಿದಿಲ್ಲ.
ಶುಭ್ಮನ್ ಗಿಲ್ ಕೂಡ ಹಲವು ದಿನಗಳ ಬಳಿಕ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಗಿಲ್ ಮತ್ತು ಪೂಜಾರಾ ಜೋಡಿ ಇಂಗ್ಲೆಂಡ್ ವೇಗಿಗಳ ಮುಂದೆ ರನ್ಗಳಿಸಲು ಪರದಾಡಿತ್ತು. ಅಷ್ಟೇ ಅಲ್ಲ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆ್ಯಂಡರ್ಸನ್ ಸ್ವಿಂಗ್ ಬೌಲಿಂಗ್ ಎದುರಿಸಲು ಪರದಾಡಿತು.
ಶುಭ್ಮನ್ ಗಿಲ್ 17 ರನ್ಗಳಿಗೆ ಆಟ ಮುಗಿಸಿದರೆ, ಪೂಜಾರಾ ಕಾಣಿಕೆ ಕೇವಲ 13 ರನ್. ಇಬ್ಬರೂ ಕೂಡ ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ನಲ್ಲಿ ಎರಡನೇ ಸ್ಲಿಪ್ನಲ್ಲಿದ್ದ ಜಾಕ್ ಕ್ರೌಲಿಗೆ ಕ್ಯಾಚ್ ನೀಡಿದರು. ಗಿಲ್ ಕೇವಲ 24 ಎಸೆತಗಳನ್ನು ಎದುರಿಸಿದರೆ ಪೂಜಾರಾ 46 ಬಾಲ್ ಎದುರಿಸಿದ್ದರು.
ಟೀಮ್ ಇಂಡಿಯಾದ ಪ್ರಯೋಗ ಮೊದಲ ದಿನವೇ ವೈಫಲ್ಯ ಕಂಡಿದ್ದರಿಂದ ಒತ್ತಡಕ್ಕೆ ಸಿಲುಕಿದೆ. ಆದರೆ ಉಳಿದ ಬ್ಯಾಟ್ಸ್ಮನ್ಗಳು ಉತ್ತಮ ಕಾಣಿಕೆ ನೀಡಬೇಕಿದೆ.