ಗಾಯದ ಸಮಸ್ಯೆಯಿಂದಾಗಿ ಐಪಿಎಲ್ ಟೂರ್ನಿಯಿಂದ ಔಟ್ ಆಗಿರುವ ನ್ಯೂಜಿ಼ಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಂಸನ್ ಇದೀಗ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದಲೂ ಸಹ ಹೊರಗುಳಿಯುವ ಆತಂಕ ಎದುರಾಗಿದೆ.
16ನೇ ಆವೃತ್ತಿ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಪರವಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದಿದ್ದ ಕೇನ್ ವಿಲಿಯಂಸನ್, ಫೀಲ್ಡಿಂಗ್ ವೇಳೆಯಲ್ಲಿ ಗಾಯಗೊಂಡಿದ್ದರು. ಮಂಡಿಗೆ ತೀವ್ರವಾದ ಗಾಯವಾದ ಹಿನ್ನೆಲೆಯಲ್ಲಿ ಟೂರ್ನಿಯಿಂದ ಔಟ್ ಆಗಿರುವ ಕೇನ್ ವಿಲಿಯಂಸನ್ ನಂತರ ನ್ಯೂಜಿ಼ಲೆಂಡ್ಗೆ ವಾಪಸ್ಸಾಗಿದ್ದರು. ಇದೀಗ ವಿಲಿಯಂಸನ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಇದರಿಂದ ಚೇತರಿಸಿಕೊಳ್ಳಲು ಕಾಲಾವಕಾಶ ಹಿಡಿಯಲಿದೆ.
ಈ ಹಿನ್ನೆಲೆಯಲ್ಲಿ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ವಿಲಿಯಂಸನ್ ಲಭ್ಯವಾಗುವ ಸಾಧ್ಯತೆ ಕಡಿಮೆ ಎಂದು ನ್ಯೂಜಿ಼ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಪ್ರಸ್ತುತ ವಿಶ್ರಾಂತಿ ಪಡೆಯುತ್ತಿರುವ ಕಿವೀಸ್ ಮಾಜಿ ನಾಯಕ ಮುಂದಿನ 3 ವಾರಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ.
ಏಕದಿನ ವಿಶ್ವಕಪ್ ಟೂರ್ನಿಗೆ ಕೇನ್ ವಿಲಿಯಂಸನ್ ಲಭ್ಯವಿಲ್ಲದೆ ಇರುವುದು ಕಿವೀಸ್ ತಂಡಕ್ಕೆ ಭಾರೀ ಆಘಾತ ಉಂಟು ಮಾಡಿದೆ. 2019ರ ಏಕದಿನ ವಿಶ್ವಕಪ್ನಲ್ಲಿ ನ್ಯೂಜಿ಼ಲೆಂಡ್ ತಂಡವನ್ನ ಮುನ್ನಡೆಸಿದ್ದ ವಿಲಿಯಂಸನ್, ತಂಡವನ್ನ ಫೈನಲ್ಗೆ ಕೊಂಡೊಯ್ಯುವಲ್ಲಿ ಯಶಸ್ಸು ಕಂಡಿದ್ದರು. ಆದರೆ ಶಸ್ತ್ರಚಿಕಿತ್ಸೆಗೆ ಒಳಗಾಗುವ ವಿಲಿಯಂಸನ್ ಶೀಘ್ರವೇ ಗುಣಮುಖರಾಗುವ ನಿರೀಕ್ಷೆ ಹೊಂದಲಾಗಿದೆ.
ODI World Cup, IPL 2023, New Zealand, Kane Williamson, Gujrat Titans,