ಕುಸಲ್ ಮೆಂಡಿಸ್(87), ನಾಯಕ ದಿಮುತ್ ಕರುಣಾರತ್ನೆ(50) ಹಾಗೂ ಇತರೆ ಬ್ಯಾಟ್ಸ್ಮನ್ಗಳ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಅತಿಥೇಯ ನ್ಯೂಜಿ಼ಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಮೊದಲ ದಿನದ ಗೌರವಕ್ಕೆ ಪಾತ್ರವಾಗಿದೆ.
ಕ್ರೈಸ್ಟ್ಚರ್ಚ್ನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತ ಶ್ರೀಲಂಕಾ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆಯಿತು. ಆರಂಭಿಕ ಆಘಾತದ ನಡುವೆಯೂ ಕಮ್ ಬ್ಯಾಕ್ ಮಾಡಿದ ಶ್ರೀಲಂಕಾ ಮೊದಲ ದಿನದಂತ್ಯಕ್ಕೆ 75 ಓವರ್ಗಳಲ್ಲಿ 6 ವಿಕೆಟ್ಗೆ 305 ರನ್ಗಳಿಸಿದೆ. ಲಂಕಾ ಪರ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಧನಂಜಯ ಡಿಸಿಲ್ವಾ(39*) ಹಾಗೂ ಕುಸನ್ ರಜಿತ(16*) ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಲಂಕಾ ಪರ ಆರಂಭಿಕರಾಗಿ ಕಣಕ್ಕಿಳಿದ ಫರ್ನಾಂಡೋ(13) ಬಹುಬೇಗನೆ ನಿರ್ಗಮಿಸಿದರು. ಆದರೆ ನಂತರದಲ್ಲಿ ಜೊತೆಯಾದ ಕರುಣಾರತ್ನೆ(50) ಹಾಗೂ ಕುಸನ್ ಮೆಂಡಿಸ್(87) 2ನೇ ವಿಕೆಟ್ಗೆ 137 ರನ್ಗಳ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಈ ಇಬ್ಬರು ಕೆಲವೇ ಬಾಲ್ಗಳ ಅಂತರದಲ್ಲಿ ಔಟಾಗಿ ನಿರಾಸೆ ಅನುಭವಿಸಿದರು.
ಈ ಹಂತದಲ್ಲಿ ಕಣಕ್ಕಿಳಿದ ಮ್ಯಾಥ್ಯೂಸ್(47) ಹಾಗೂ ಚಂದಿಮಾಲ್(39) 4ನೇ ವಿಕೆಟ್ಗೆ 82 ರನ್ಗಳ ಜೊತೆಯಾಟದ ಮೂಲಕ ಆಸರೆಯಾದರು. ಆದರೆ ಡಿಕ್ವೆಲ್ಲಾ(7) ರನ್ಗಳಿಸಿದರೆ, ಧನಂಜಯ ಡಿಸೆಲ್ವಾ(39*) ಹಾಗೂ ದಿನದಂತ್ಯಕ್ಕೆ ಬಂದ ಕಸುನ್ ರಜಿತಾ(17*) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನ್ಯೂಜಿ಼ಲೆಂಡ್ ಪರ ಟಿಮ್ ಸೌಥಿ 3, ಮ್ಯಾಟ್ ಹೆನ್ರಿ 2 ಹಾಗೂ ಬ್ರೇಸ್ವೆಲ್ 1 ವಿಕೆಟ್ ಪಡೆದರು.
NZ v SL, Sri Lanka, New Zealand, Test Cricket, Sports Karnataka, Kusal Mendis