ಐಸಿಸಿ ಟಿ-20 ತಂಡದಲ್ಲಿಲ್ಲ ಟೀಮ್ ಇಂಡಿಯಾ ಆಟಗಾರರು- ಬಾಬರ್ ಅಝಮ್ ನಾಯಕ
ಐಸಿಸಿ ವರ್ಷದ ಟಿ-20 ತಂಡವನ್ನು ಪ್ರಕಟಿಸಿದೆ. ಈ ಬಾರಿಯ ಐಸಿಸಿ ಟಿ-20 ತಂಡದಲ್ಲಿ ಭಾರತದ ಆಟಗಾರರು ಸ್ಥಾನ ಪಡೆದುಕೊಂಡಿಲ್ಲ. 11 ಮಂದಿಯ ತಂಡವನ್ನು ಪ್ರಕಟಿಸಿರುವ ಐಸಿಸಿ ನಾಯಕನಾಗಿ ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಮ್ ಅವರನ್ನು ಆಯ್ಕೆ ಮಾಡಿದೆ.
ಆರಂಭಿಕರಾಗಿ ಇಂಗ್ಲೆಂಡ್ ನ ಜೋಸ್ ಬಟ್ಲರ್ ಮತ್ತು ಪಾಕಿಸ್ತಾನ ವಿಕೆಟ್ ಕೀಪರ್ ಮಹಮ್ಮದ್ ರಿಜ್ವಾನ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು ಮೂರನೇ ಕ್ರಮಾಂಕದಲ್ಲಿ ಬಾಬರ್ ಅಝಮ್, ದಕ್ಷಿಣ ಆಫ್ರಿಕಾದ ಆಡಿಯೆನ್ ಮಾಕ್ರ್ರಾಮ್, ಮಿಟ್ಷೆಲ್ ಮಾರ್ಶ್, ಡೇವಿಲ್ ಮಿಲ್ಲರ್, ಟಾಬ್ರಾಝ್ ಶಂಶಿ, ಜೋಶ್ ಹಾಝಲ್ ವುಡ್, ವಾನಿಂದು ಹಸರಂಗ, ಮಷ್ತಾಫಿರ್ ರಹಮಾನ್ ಹಾಗೂ ಶಾಹೀನ್ ಆಫ್ರಿದಿ ಅವರು ಸ್ಥಾನ ಪಡೆದಿದ್ದಾರೆ.
ಐಸಿಸಿ ಪುರುಷರ ವರ್ಷದ ಟಿ-20 ತಂಡ
ಜೋಸ್ ಬಟ್ಲರ್
ಮಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್)
ಬಾಬರ್ ಅಝಮ್ (ನಾಯಕ)
ಆಡಿಯನ್ ಮಾಕ್ರ್ರಾಮ್
ಮಿಟ್ಚೆಲ್ ಮಾರ್ಶ್
ಡೆವಿಡ್ ಮಿಲ್ಲರ್
ಟಾಬ್ರಾಝ್ ಶಂಶಿ
ಜೋಶ್ ಹಾಝಲ್ ವುಡ್
ವಾನಿಂದು ಹಸರಂಗ
ಮಷ್ತಾಫೀರ್ ರಹಮಾನ್
ಶಾಹೀನ್ ಆಫ್ರಿದಿ