ನಿಕ್ ಕಿರ್ಗಿಯೋಸ್ ಮೊಣಕಾಲಿನ ಗಾಯದಿಂದ ಆಸ್ಟ್ರೇಲಿಯನ್ ಓಪನ್ನಿಂದ ಹಿಂದೆ ಸರಿದಿದ್ದಾರೆ. ಅವರು ತಮ್ಮ ಮೊದಲ ಸುತ್ತಿನ ಪಂದ್ಯಕ್ಕೂ ಮೊದಲು ಈ ನಿರ್ಧಾರ ಪ್ರಕಟಿಸಿದ್ದಾರೆ.
ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯ ಮೊದಲ ದಿನದಂದು ಕಿರ್ಗಿಯೋಸ್ ಸೋಮವಾರ ಟೂರ್ನಿಯಿಂದ ಹಿಂದೆ ಸರಿದ್ದಾಗಿ ತಿಳಿಸಿದ್ದಾರೆ. ಮೆಲ್ಬೋರ್ನ್ ಪಾರ್ಕ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ನಿಕ್ ಕಿರ್ಗಿಯೋಸ್ ಈ ವಿಷಯ ತಿಳಿಸಿದ್ದಾರೆ. ಕಿ
ರ್ಗಿಯೋಸ್ ಮೆಲ್ಬೋರ್ನ್ನಲ್ಲಿ 19 ನೇ ಶ್ರೇಯಾಂಕವನ್ನು ಹೊಂದಿದ್ದರು ಮತ್ತು ಮಂಗಳವಾರ ಮೊದಲ ಸುತ್ತಿನಲ್ಲಿ ರೋಮನ್ ಸಫಿಯುಲಿನ್ ಅವರನ್ನು ಎದುರಿಸಬೇಕಾಗಿತ್ತು. ಆಸ್ಟ್ರೇಲಿಯಾ ಓಪನ್ನಲ್ಲಿ ಆಡದಿರುವುದು ಅವರಿಗೆ ದೊಡ್ಡ ಹೊಡೆತವಾಗಿದೆ. ಏಕೆಂದರೆ ಆತಿಥೇಯ ದೇಶದ ಆಟಗಾರ. ಅವರು ಈ ಪಂದ್ಯಾವಳಿಯ ಚಾಂಪಿಯನ್ ಪಟ್ಟ ಅಲಂಕರಿಸುವ ಸಾಧ್ಯತೆಗಳು ಹೆಚ್ಚಾಗಿದ್ದವು. 1976ರ ನಂತರ ಆಸ್ಟ್ರೇಲಿಯದ ಯಾವುದೇ ಆಟಗಾರರು ಈ ಟೂರ್ನಿಯನ್ನು ಗೆದ್ದಿರಲಿಲ್ಲ.
ಕಿರ್ಗಿಯೋಸ್ ವಿಂಬಲ್ಡನ್ ರನ್ನರ್ ಅಪ್
ಕಳೆದ ವರ್ಷ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಕಿರ್ಗಿಯೋಸ್ ರನ್ನರ್ ಅಪ್ ಆಗಿದ್ದರು. ಆ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ 4–6, 6–3, 6–4, 7–6 (7–3)ರಿಂದ ಕಿರ್ಗಿಯೊಸ್ ಅವರನ್ನು ಸೋಲಿಸಿದರು.
Nick Kyrgios, Australian Open, Injury, Tennis