IPL 15ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 26ರಿಂದ ಈ ಬಾರಿಯ ಐಪಿಎಲ್ ಆರಂಭವಾಗಲಿದೆ. 10 ತಂಡಗಳ ಈ ಹೋರಾಟದಲ್ಲಿ 2 ಗುಂಪುಗಳಾಗಿ ತಂಡಗಳನ್ನು ವಿಂಗಡಿಸಲಾಗಿದೆ. ಈ ಮಧ್ಯೆ ಐಪಿಎಲ್ನ ಹಲವು ನಿಯಮಗಳು ಬದಲಾಗಿವೆ. ಈ ಬಾರಿ ಹೊಸ ನಿಯಮಗಳು ಐಪಿಎಲ್ನಲ್ಲಿ ಜಾರಿಗೆ ಬರಲಿದೆ.
2 ಬಾರಿ ಡಿಆರ್ಎಸ್ ಅವಕಾಶ..?
ಈ ಬಾರಿಯ ಐಪಿಎಲ್ನಲ್ಲಿ ತಂಡಗಳು ಎರಡು ಬಾರಿ ಡಿಸಿಷನ್ ರಿವಿವ್ಯೂ ಸಿಸ್ಟಂ ಅಥವಾ ಡಿಆರೆಸ್ ಬಳಕೆ ಮಾಡಬಹುದು. ಈ ತನಕ ಒಮ್ಮೆ ಮಾತ್ರ ಡಿಆರ್ಎಸ್ ಅವಕಾಶ ಬಳಸಿಕೊಳ್ಳಬಹುದಿತ್ತು.
ಹೊಸ ಬ್ಯಾಟರ್ಗೆ ಸ್ಟ್ರೈಕ್ನಲ್ಲೇ ಅವಕಾಶ
ಎಂಸಿಸಿ ಜಾರಿಗೆ ತಂದಿರುವ ಬ್ಯಾಟರ್ ಕ್ಯಾಚ್ ನೀಡಿ ಔಟಾದರೂ ಹೊಸ ಬ್ಯಾಟರ್ ಸ್ಟ್ರೈಕ್ನಲ್ಲೇ ಬ್ಯಾಟಿಂಗ್ ಮಾಡಬೇಕು ನಿಯಮವನ್ನು ಐಪಿಎಲ್ ನಲ್ಲಿ ಜಾರಿಗೆ ಬರಲಿದೆ. ಇದರಂತೆ ಕ್ಯಾಚ್ ವೇಳೆ ನಾನ್ ಸ್ಟ್ರೈಕ್ನಲ್ಲಿ ಬ್ಯಾಟರ್ ಕ್ರೀಸ್ ಕ್ರಾಸ್ ಮಾಡಿದ್ದರೂ ಸಹಾ ಹೊಸದಾಗಿ ಬರುವ ಬ್ಯಾಟರ್ ಸ್ಟ್ರೈಕ್ ತೆಗೆದುಕೊಳ್ಳಬೇಕಾಗಿರುತ್ತದೆ. ಈ ನಿಯಮ ಈ ಬಾರಿಯ ಐಪಿಎಲ್ನಲ್ಲಿ ಇರಲಿದೆ.
ಸೂಪರ್ ಓವರ್ನಲ್ಲೂ ಫಲಿತಾಂಶ ಬಾರದೇ ಇದ್ದರೆ..?
ಈ ಹೊಸ ನಿಯಮ ಪ್ಲೇ-ಆಫ್ ಮತ್ತು ಫೈನಲ್ ಪಂದ್ಯಕ್ಕೆ ಮಾತ್ರ ಅನ್ವಯವಾಗಲಿದೆ. ಪ್ಲೇ-ಆಫ್ ಮತ್ತು ಫೈನಲ್ ಪಂದ್ಯ ಟೈ ಆದರೆ ಸೂಪರ್ ಓವರ್ ಅವಕಾಶ ಇರುತ್ತದೆ. ಇದೂ ಟೈ ಆದರೆ ಮತ್ತೊಂದು ಸೂಪರ್ ಓವರ್ ಆಡಿಸಲಾಗುತ್ತದೆ. 2 ಸೂಪರ್ ಓವರುಗಳಲ್ಲಿ ಫಲಿತಾಂಶ ಬಾರದೇ ಇದ್ದಾರೆ, ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆಯುವ ತಂಡವನ್ನು ವಿಜೇತ ತಂಡ ಎಂದು ನಿರ್ಧರಿಸಲಾಗುತ್ತದೆ. ಹೀಗಾಗಿ ಈ ಬಾರಿ ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆಯಲು ಪೈಪೋಟಿ ನಡೆಯಲಿದೆ.