Commonwealth Games ಭಾಗವಹಿಸಿದ ಹಿನ್ನಲೆ: ಅಭಿಮಾನಿಗಳಿಗೆ Neeraj Chopra ಪತ್ರ
ವಿಶ್ವದ ಅತ್ಯುತ್ತಮ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಗಾಯದ ಕಾರಣ 2022 ರ ಕಾಮನ್ವೆಲ್ತ್ ಗೇಮ್ಸ್ನಿಂದ ಹೊರಗುಳಿದಿದ್ದಾರೆ. ನೀರಜ್ ತಮ್ಮ ಅಭಿಮಾನಿಗಳಿಗೆ ಮತ್ತು ದೇಶಕ್ಕಾಗಿ ಪತ್ರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ದೇಶದ ಜನತೆಯ ಗೌರವ ಮತ್ತು ಪ್ರೀತಿಗೆ ಧನ್ಯವಾದ ಹೇಳಿದ್ದಾರೆ.
ಪತ್ರದಲ್ಲಿ ನೀರಜ್, “ಎಲ್ಲರಿಗೂ ನಮಸ್ಕಾರ, ನಾನು ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ನಿಮಗೆಲ್ಲರಿಗೂ ತಿಳಿಸಲು ನಾನು ಇದನ್ನು ತುಂಬಾ ದುಃಖ ಪಡುತ್ತಿದ್ದೇನೆ. ವಿಶ್ವ ಚಾಂಪಿಯನ್ಶಿಪ್ನ ನಾಲ್ಕನೇ ಥ್ರೋ ಸಮಯದಲ್ಲಿ ಸ್ನಾಯು ಸೆಳೆತವಾದಂತೆ ಕಂಡು ಬಂದಿತು. ಆಗ ಪರೀಕ್ಷೆ ನಡೆಸಿದಾಗ ವಿಶ್ರಾಂತಿಯ ಅವಶ್ಯಕತೆ ಇದೆ ಎಂದು ತಿಳಿದು ಬಂದಿತು” ಎಂದು ಬರೆದು ಕೊಂಡಿದ್ದಾರೆ.
“ನಾನು ಬರ್ಮಿಂಗ್ಹ್ಯಾಮ್ನಲ್ಲಿ ದೇಶವನ್ನು ಪ್ರತಿನಿಧಿಸಲು ಸಾಧ್ಯವಾಗುವುದಿಲ್ಲ ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ಸದ್ಯಕ್ಕೆ ನನ್ನ ಸಂಪೂರ್ಣ ಗಮನವು ನನ್ನ ಪುನರ್ವಸತಿ ಮೇಲೆ ಕೇಂದ್ರೀಕೃತವಾಗಿದ್ದು, ಶೀಘ್ರದಲ್ಲೇ ಮೈದಾನಕ್ಕೆ ಮರಳಲು ಪ್ರಯತ್ನಿಸುತ್ತೇನೆ” ಎಂದಿದ್ದಾರೆ.
“ಕಳೆದ ಕೆಲವು ದಿನಗಳಲ್ಲಿ ನಾನು ಎಲ್ಲಾ ದೇಶವಾಸಿಗಳಿಂದ ಪಡೆದ ಪ್ರೀತಿ ಮತ್ತು ಗೌರವಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ನಮ್ಮ ದೇಶದ ಎಲ್ಲಾ ಆಟಗಾರರನ್ನು ಹೀಗೆ ನೀವೆಲ್ಲರೂ ಬೆಂಬಲಿಸುವುದನ್ನು ಮುಂದುವರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಜೈ ಹಿಂದ್” ಎಂದು ಬರೆದುಕೊಂಡಿದ್ದಾರೆ.