5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಬಲಿಷ್ಠ ತಂಡ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಈ ಬಾರಿ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯಾ ತಂಡದಿಂದ ಹೊರ ಬಿದ್ದಿದ್ದಾರೆ. ಆಲ್ರೌಂಡರ್ಗಳ ಕೋಟಾ ಖಾಲಿ ಬಿದ್ದಿದೆ. ವಿದೇಶಿ ಆಟಗಾರರ ಬಲವೂ ಕೊಂಚ ಕಡಿಮೆ ಆಗಿದೆ. ನಾಯಕ ರೋಹಿತ್ ಶರ್ಮಾ, ಇಶನ್ ಕಿಶನ್, ಬುಮ್ರಾ ಮತ್ತು ಪೊಲಾರ್ಡ್ ಮೇಲೆ ಎಲ್ಲವೂ ನಿಂತಿದೆ.
ಮುಂಬೈ ತಂಡಕ್ಕೆ ಈ ಬಾರಿ ಎಡಗೈ ಸ್ಪಿನ್ನರ್ಗಳ ಕೊರತೆ ಎದ್ದು ಕಾಣಲಿದೆ. ಆದರೆ ಭಾರತೀಯ ಪ್ರತಿಭೆಗಳ ಬಗ್ಗೆ ಮುಂಬೈ ನಂಬಿಕೆ ಇಟ್ಟುಕೊಂಡಿದೆ. ಜೋಫ್ರಾ ಆರ್ಚರ್ ಲಭ್ಯತೆ ಮೇಲೆ ಮುಂಬೈ ಕಣ್ಣಿಟ್ಟಿದೆ. ಮುಂಬೈ ಇಂಡಿಯನ್ಸ್ ರಣತಂತ್ರದ ಬಗ್ಗೆ ಈ ಬಾರಿ ಎಲ್ಲಾ ತಂಡಗಳು ಕಣ್ಣಿಟ್ಟಿವೆ.
ಮುಂಬೈ ಇಂಡಿಯನ್ಸ್ ಸಂಭಾವ್ಯ XI
-
ರೋಹಿತ್ ಶರ್ಮಾ
-
ಇಶನ್ ಕಿಶನ್
-
ಅನ್ಮೊಲ್ಪ್ರಿತ್ ಸಿಂಗ್
-
ಸೂರ್ಯಕುಮಾರ್ ಯಾದವ್
-
ಡೆವಾಲ್ಡ್ ಬ್ರೆವಿಸ್
-
ಕೈರಾನ್ ಪೊಲಾರ್ಡ್
-
ಟಿಮ್ ಡೇವಿಡ್
-
ಸಂಜಯ್ ಯಾದವ್/ ಬಸಿಲ್ ಥಂಪಿ
-
ಮಯಾಂಕ್ ಮಾರ್ಕಂಡೇ/ ಮುರುಗನ್ ಅಶ್ವಿನ್
-
ಜಸ್ಪ್ರಿತ್ ಬುಮ್ರಾ
-
ಜೋಫ್ರಾ ಆರ್ಚರ್/ ರಿಲಿ ಮೆರಿಡಿತ್
ರೋಹಿತ್ ಶರ್ಮಾ ಮತ್ತು ಇಶನ್ ಕಿಶನ್ ಮುಂಬೈ ತಂಡದ ಲೆಫ್ಟ್ ರೈಟ್ ಓಪನಿಂಗ್ ಕಾಂಬಿನೇಷನ್. ಅನ್ಮೋಲ್ ಪ್ರಿತ್ ಸಿಂಗ್ ಮತ್ತು ಸೂರ್ಯ ಕುಮಾರ್ ಯಾದವ್ ಸ್ಥಾನ ಪಂದ್ಯದ ಸ್ಥಿತಿಗೆ ತಕ್ಕಂತೆ ಬದಲಾಗಬಹುದು. ಜೂನಿಯರ್ ಎ ಬಿಡಿ ವಿಲಿಯರ್ಸ್ ಖ್ಯಾತಿಯ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ ಆಟದ ಮೇಲೆ ಗಮನವಿದೆ. ಕೈರಾನ್ ಪೊಲಾರ್ಡ್ ಮತ್ತು ಟಿಮ್ ಡೇವಿಡ್ ಆಲ್ರೌಂಡರ್ಗಳು ಕಂ ಫಿನಿಷರ್ಗಳು. ಸಂಜಯ್ ಯಾದವ್ ಮತ್ತು ಬಸಿಲ್ ಥಂಪಿ ನಡುವೆ ಸ್ಥಾನ ಅದಲುಬದಲಾಗಬಹುದು. ಮಾಯಾಂಕ್ ಮಾರ್ಕಂಡೆ ಮತ್ತು ಮುರುಗನ್ ಅಶ್ವಿನ್ ಸ್ಥಾನವೂ ಪ್ರದರ್ಶನದ ಮೇಲೆ ನಿಂತಿದೆ. ಜಸ್ಪ್ರಿತ್ ಬುಮ್ರಾ ಫಾಸ್ಟ್ ಬೌಲಿಂಗ್ನ ಟ್ರಂಪ್ ಕಾರ್ಡ್.ಜೋಫ್ರಾ ಆರ್ಚರ್ ಲಭ್ಯ ಆಗುವ ತನಕ ರಿಲಿ ಮೆರಿಡಿತ್ ಬೌಲಿಂಗ್ ಆರಂಭಿಸಬಹುದು.
ಮುಂಬೈ ತಂಡದಲ್ಲಿ ಹೊಸ ಹೊಸ ಅಸ್ತ್ರಗಳಿವೆ. ಆದರೆ ಅವರೆಲ್ಲರ ಪ್ರಯೋಗ ಆಗುತ್ತಾ ಅನ್ನುವ ಪ್ರಶ್ನೆ ಇದೆ. ಪ್ರಸ್ತುತ ಸ್ಥಿತಿಯಲ್ಲಿ ಮುಂಬೈ ತಂಡಕ್ಕೆ ಗೆಲ್ಲುವ ಪ್ಲೇಯಿಂಗ್ XI ರಚನೆ ಮಾಡುವುದೇ ಸವಾಲಿನ ಕೆಲಸವಾಗಿದೆ.