Mumbai Indians- ಜಯವರ್ಧನೆ, ಜಹೀರ್ ಅಲ್ಲ…ಮುಂಬೈ ಹೆಡ್ ಕೋಚ್ ಯಾರು ?
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಈಗ ಕೇವಲ ಐಪಿಎಲ್ ಗೆ ಸೀಮಿತವಾಗಿಲ್ಲ. ಬದಲಾಗಿ ಜಾಗತಿಕ ಮಟ್ಟದ ಫ್ರಾಂಚೈಸಿಯಾಗಿದೆ. ವಿಶ್ವ ಕ್ರಿಕೆಟ್ ನಲ್ಲಿ ಮೂರು ಟಿ-20 ತಂಡಗಳ ಯಜಮಾನಿಕೆಯನ್ನು ವಹಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಕ್ರಿಕೆಟ್ ಆಟವನ್ನೇ ದೊಡ್ಡ ಉದ್ಯಮವನ್ನಾಗಿಸಿಕೊಂಡಿದೆ.
ಭಾರತದಲ್ಲಿ ಐಪಿಎಲ್, ಸೌತ್ ಆಫ್ರಿಕಾ ಕ್ರಿಕೆಟ್ ಲೀಗ್ ಮತ್ತು ಯುಎಇ ಕ್ರಿಕೆಟ್ ಲೀಗ್ ಗಳಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಳನ್ನು ಖರೀದಿ ಮಾಡಿದೆ.
ಇದೀಗ ತನ್ನ ಕಾರ್ಯವ್ಯಾಪ್ತಿಯನ್ನು ಕೂಡ ಹೆಚ್ಚಿಸಿಕೊಂಡಿರುವ ಮುಂಬೈ ಇಂಡಿಯನ್ಸ್, ಸಾಕಷ್ಟು ಬದಲಾವಣೆಗಳನ್ನು ಕೂಡ ಮಾಡಿಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಮಹೇಲಾ ಜಯವರ್ಧನೆ ಮತ್ತು ಜಹೀರ್ ಖಾನ್ ಅವರಿಗೆ ಉನ್ನತ ಹುದ್ದೆಯನ್ನು ನೀಡಲಾಗಿದೆ.
ಮಹೇಲಾ ಜಯವರ್ಧನೆ ಅವರು ಗ್ಲೋಬಲ್ ಹೆಡ್ ಆಫ್ ಪರ್ಫೊಮೆನ್ಸ್ ಹಾಗೂ ಜಹೀರ್ ಹೆಡ್ ಆಫ್ ಕ್ರಿಕೆಟ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಹೀಗಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ನೂತನ ಕೋಚ್ ನ ಆಯ್ಕೆ ಸದ್ಯದಲ್ಲೇಧ ಘೋಷಣೆಯಾಗಲಿದೆ. ಮಹೇಲಾ ಜಯವರ್ಧನೆ ಅವರು 2017ರಿಂದ ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದೀಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನಗೆ ಹೆಚ್ಚಿನ ಹಾಗೂ ಉನ್ನತ ಹುದ್ದೆಯನ್ನು ನೀಡಿರುವುದಕ್ಕೆ ಮಹೇಲಾ ಜಯವರ್ಧನೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನೀತಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದರೆ.
ಅಂದ ಹಾಗೇ ಮುಂಬೈ ಇಂಡಿಯನ್ಸ್ ಯುನೈಟೆಡ್ ಅರಬ್ ಎಮಿರೇಟ್ಸ್ ಟಿ-20 ಕ್ರಿಕೆಟ್ ಲೀಗ್ ನಲ್ಲಿ ಮುಂಬೈ ಎಮಿರೇಟ್ಸ್ ಹಾಗೂ ಸೌತ್ ಆಫ್ರಿಕಾ ಕ್ರಿಕೆಟ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ಕೇಪ್ ಟೌನ್ ಹೆಸರಿನಲ್ಲಿ ಕಣಕ್ಕಿಳಿಯಲಿದೆ.
ಒಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಯಾರು ಅನ್ನೋದು ಈಗ ಸದ್ಯಕ್ಕಿರುವ ಕುತೂಹಲ.