ಮೊಟೆರಾ ಅಂಗಣ ಮತ್ತು ಟೀಮ್ ಇಂಡಿಯಾದ ಐತಿಹಾಸಿಕ ಕ್ಷಣಗಳು motera stadium and team india memories
ಅಹಮದಾಬಾದ್ ನ ಮೊಟೆರಾ ಮೈದಾನ ಈಗ ನರೇಂದ್ರ ಮೋದಿ ಕ್ರೀಡಾಂಗಣವಾಗಿದೆ.
ಅತ್ಯಾಧುನಿಕ ಮಾದರಿಯ ಸೌಲಭ್ಯಗಳನ್ನು ಹೊಂದಿರುವ ಈ ಮೈದಾನವಿಗೆ ಈಗ ಟೀಮ್ ಇಂಡಿಯಾದ ಅವಿಸ್ಮರಣೀಯ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಹೌದು, ವೆಸ್ಟ್ ಇಂಡೀಸ್ ವಿರುದ್ಧ ಫೆಬ್ರವರಿ 6ರಂದು ನಡೆಯಲಿರುವ ಮೊದಲ ಏಕದಿನ ಪಂದ್ಯ ಟೀಮ್ ಇಂಡಿಯಾದ ಪಾಲಿಗೆ ಮಹೋನ್ನತ ಪಂದ್ಯವಾಗಲಿದೆ.
ಏಕದಿನ ಕ್ರಿಕೆಟ್ ನ ಒಂದು ಸಾವಿರನೇ ಪಂದ್ಯವನ್ನಾಡಲಿರುವ ಟೀಮ್ ಇಂಡಿಯಾದ ಸಹಜವಾಗಿಯೇ ಗೆಲುವನ್ನೇ ಎದುರು ನೋಡುತ್ತಿದೆ.
ಆದ್ರೆ ಕೋವಿಡ್ ಸೋಂಕಿನಿಂದಾಗಿ ಈ ಐತಿಹಾಸಿಕ ಪಂದ್ಯವನ್ನು ನೋಡಲು ಪ್ರೇಕ್ಷಕರಿಗೆ ಅವಕಾಶವಿಲ್ಲ. ಹೀಗಾಗಿ ಸದ್ದುಗದ್ದಲವಿಲ್ಲದೇ ಈ ಪಂದ್ಯ ನಡೆಯಲಿದೆ.
ಅಂದ ಹಾಗೇ ಮೊಟೆರಾ ಅಂಗಣ ಟೀಮ್ ಇಂಡಿಯಾ ಟಗಾರರು ಮತ್ತು ಟೀಮ್ ಇಂಡಿಯಾದ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ.
1- 1987ರಲ್ಲಿ ಸುನೀಲ್ ಗವಾಸ್ಕರ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 10 ಸಾವಿರ ರನ್ ದಾಖಲಿಸಿದ್ದು ಇದೇ ಮೈದಾನದಲ್ಲಿ.
2- 1994ರಲ್ಲಿ ಕಪಿಲ್ ದೇವ್ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
3- 1999ರಲ್ಲಿ ಸಚಿನ್ ತೆಂಡುಲ್ಕರ್ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ದ್ವಿಶತಕ ದಾಖಲಿಸಿದ್ದಾರೆ.
4- ಆಫ್ ಸ್ಪಿನ್ನರ್ ಆರ್. ಅಶ್ವಿನ್ 400ನೇ ವಿಕೆಟ್ ಪಡೆದಿರುವುದು ಕೂಡ ಇದೇ ಮೈದಾನದಲ್ಲಿ.
5- ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ತನ್ನ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ್ದಾರೆ.
6- 1983ರಲ್ಲಿ ಕಪಿಲ್ ದೇವ್ ವೆಸ್ಟ್ ಇಂಡೀಸ್ ವಿರುದ್ಧ 83ಕ್ಕೆ 9 ವಿಕೆಟ್ ಪಡೆದಿದ್ದಾರೆ.
7- ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್ ನಲ್ಲಿ 18 ಸಾವಿರ ರನ್ ದಾಖಲಿಸಿದ್ದು ಕೂಡ ಇದೇ ಮೈದಾನದಲ್ಲಿ. (2011ರ ವಿಶ್ವಕಪ್ ಆಸ್ಟ್ರೇಲಿಯಾ ವಿರುದ್ಧ)
8- ವಿವಿಎಸ್ ಲಕ್ಷ್ಮಣ್ 1996ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದಾರೆ.
ಹೀಗೆ ಹಲವಾರು ರೋಚಕ ಪಂದ್ಯಗಳಿಗೆ ಮೊಟೆರಾ ಅಂಗಣ ಸಾಕ್ಷಿಯಾಗಿದೆ. ಇದೀಗ ಟೀಮ್ ಇಂಡಿಯಾದ ಸಾವಿರ ಏಕದಿನ ಪಂದ್ಯಕ್ಕೂ ಮೊಟೆರಾ ಅಂಗಣ ಸಾಕ್ಷಿಯಾಗುತ್ತಿದೆ.