ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ರೇಸ್ನಲ್ಲಿದ್ದು ಇಂದು ಸನ್ರೈಸರ್ಸ್ ತಂಡವನ್ನು ಎದುರಿಸಲಿದೆ. ಒಂದು ಅವಕಾಶದಲ್ಲಿ ಮುಂಬೈ ತನ್ನ ತಾಕತ್ತು ಪ್ರದರ್ಶಿಸಬೇಕಿದ್ದು ಸನ್ರೈಸರ್ಸ್ ವಿರುದ್ಧ ಭಾರೀ ಅಂತರದಿಂದ ಗೆಲ್ಲಬೇಕಿದೆ.
ಸನ್ರೈಸರ್ಸ್ ತಂಡ ಕಳಪೆ ಆಟ ಪ್ರದರ್ಶಿಸಿ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿದೆ. ಲೀಗ್ನ ಕೊನೆಯ ಪಂದ್ಯ ಆಡುತ್ತಿರುವ ಮುಂಬೈ ಇಂಡಿಯನ್ಸ್ ಈ ಪಂದ್ಯವನ್ನು ಗೆದ್ದು ಪ್ಲೇ ಆಫ್ ಪ್ರವೇಶಿಸಲು ಹವಣಿಸುತ್ತಿದೆ.
ನಾಲ್ಕು ಗೆಲುವು ಮತ್ತು ಎರಡು ಪಂದ್ಯಗಳನ್ನು ಸೋತಿರುವ ಮುಂಬೈ ಇಂದು ತವರಿನ ಅಂಗಳದ ಲಾಭ ಪಡೆಯಲಿದೆ. ಕೊನೆಯ ಅವಕಾಶದಲ್ಲಿ ನೆಟ್ ರನ್ ರೇಟ್ ಸುಧಾರಿಸಿಕೊಳ್ಳಲು ಹೋರಾಡಲಿದೆ.
ಈ ಹಿಂದಿನ ಪಂದ್ಯಗಳಲ್ಲಿ ಮುಂಬೈ ಲಖನೌ ವಿರುದ್ಧ ಸೋತಿದ್ದು ಅಂಕಪಟ್ಟಿಯಲ್ಲಿ ಹಿಂದೆ ಬಿದ್ದಿತ್ತು. ಬೌಲಿಂಗ್ ದೊಡ್ಡ ತಲೆ ನೋವಾಗಿದೆ. ಈ ಹಿಂದಿನ ಪಂದ್ಯಗಳಲ್ಲಿ 200ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ. ಇಂದಿನ ಪಂದ್ಯ ಬೌಲರ್ಗಳಿಗೆ ಮತ್ತೊಂದು ಪರೀಕ್ಷೆಯಾಗಿದೆ.
ಮುಂಬೈ ಬ್ಯಾಟಿಂಗ್ ಬಲಿಷ್ಠವಾಗಿದೆ. ಸೂರ್ಯ ಕುಮಾರ್, ಟಿಮ್ ಡೇವಿಡ್, ಕ್ಯಾಮರೊನ್ ಗ್ರೀನ್, ಇಶಾನ್ ಕಿಶನ್ ಮತ್ತು ನೆಹಾಲ್ ವಾದೇರಾ ಅವರುಗಳಿಂದ ಸೋಟಕ ಬ್ಯಾಟಿಂಗ್ ನಿರೀಕ್ಷಿಸಲಾಗಿದೆ.
ಇನ್ನು ಸನ್ರೈಸರ್ಸ್ ತಂಡ ಆರ್ಸಿಬಿ ವಿರುದ್ಧ ಆಡಿದ ರೀತಿಯಲ್ಲೆ ಆಡಲಿದೆ. ಹೆನ್ರಿಕ್ ಕ್ಲಾಸೆನ್ ಮತ್ತೊಮ್ಮೆ ಸೋಟಕ ಬ್ಯಾಟಿಂಗ್ ಮಾಡಬೇಕಿದ್ದು ಗೆಲುವಿನೊಂದಿಗೆ ವಿದಾಯ ಹೇಳಲು ಸನ್ರೈಸರ್ಸ್ ಪಣತೊಟ್ಟಿದೆ.