ಪಂಜಾಬ್ ಕಿಂಗ್ಸ್ ತಂಡಕ್ಕೆ ಮಯಾಂಕ್ ಕ್ಯಾಪ್ಟನ್.
ಕರ್ನಾಟಕದ ಸ್ಟಾರ್ ಆಟಗಾರ ಮಯಾಂಕ್ ಅಗರ್ ವಾಲ್ ಅವರು 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತವಾಗಿದೆ.
ಮುಂದಿನ ವಾರ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ಮಯಾಂಕ್ ಅಗರ್ ವಾಲ್ ಎಂಬುದು ಸದ್ಯದಲ್ಲೇ ಹೊರಬೀಳುವ ಸಾಧ್ಯತೆಗಳಿವೆ.
ಮಯಾಂಕ್ ಅಗರ್ ವಾಲ್ ಕಳೆದ ಋತುವಿನಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಿದ್ದರು. ಕೆ.ಎಲ್. ರಾಹುಲ್ ಮೊದಲ ಹಂತದಲ್ಲಿ ತಂಡದಿಂದ ಹೊರುಗುಳಿದಿದ್ರು.
ಆಗ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ರು. ಆದ್ರೆ ಎರಡನೇ ಹಂತದ ಟೂರ್ನಿಯಲ್ಲಿ ಕೆ.ಎಲ್. ರಾಹುಲ್ ಅವರೇ ತಂಡವನ್ನು ಮುನ್ನಡೆಸಿದ್ದರು.
ಇನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ಶಿಖರ್ ಧವನ್ ಎಂಟ್ರಿಯಾಗಿದ್ದಾರೆ. ನಾಯಕತ್ವದ ರೇಸ್ ನಲ್ಲಿ ಶಿಖರ್ ಧವನ್ ಹೆಸರು ಕೂಡ ಮುಂಚೂಣಿಯಲ್ಲಿತ್ತು.
ಆದ್ರೆ ಪಂಜಾಬ್ ಕಿಂಗ್ಸ್ ಟೀಮ್ ಮ್ಯಾನೇಜ್ ಮೆಂಟ್ ಮಯಾಂಕ್ ಅಗರ್ ವಾಲ್ ಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
ಅಲ್ಲದೆ ಮಯಾಂಕ್ ಅವರನ್ನು ಕಿಂಗ್ಸ್ ಪಂಜಾಬ್ ತಂಡ ರಿಟೇನ್ ಕೂಡ ಮಾಡಿಕೊಂಡಿತ್ತು.
ಹಾಗೇ ನೋಡಿದ್ರೆ ನಾಯಕತ್ವದ ಅನುಭವದಲ್ಲಿ ಮಯಾಂಕ್ ಗಿಂತ ಶಿಖರ್ ಧವನ್ ಹೆಚ್ಚು ಅನುಭವಿ ಹಾಗೂ ಹಿರಿಯ ಆಟಗಾರ.
ಧವನ್ ಅವರು ಈ ಹಿಂದೆ ಸನ್ ರೈಸರ್ಸ್ ಹೈದ್ರಬಾದ್ ತಂಡದ ನಾಯಕನಾಗಿದ್ದರು. ಅಲ್ಲದೆ 2021ರ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಶಿಖರ್ ಧವನ್ ಅವರು ಟೀಮ್ ಇಂಡಿಯಾವನ್ನು ಮುನ್ನೆಡೆಸಿದ್ದರು.
ಪಂಜಾಬ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಬಲಿಷ್ಠ ತಂಡವನ್ನೇ ಕಟ್ಟಿದೆ. ಗರಿಷ್ಠ ಮೊತ್ತಕ್ಕೆ ಆಟಗಾರರನ್ನು ಕೂಡ ಖರೀದಿ ಮಾಡಿದೆ.
ಲಿಯಾಮ್ ಲಿವಿಂಗ್ ಸ್ಟೋನ್ ಅವರನ್ನು 11.50 ಕೋಟಿ ರೂ. ಜೋನಿ ಬೇರ್ ಸ್ಟೋವ್ ಅವರನ್ನು 6.75 ಕೋಟಿ ರೂ. ಕಾಗಿಸೊ ರಬಾಡ 9.25 ಕೋಟಿ ರೂ. ಹಾಗೂ ಹೊಡಿಬಡಿ ಆಟಗಾರ ಶಾರೂಕ್ ಖಾನ್ ಅವರನ್ನು 9 ಕೋಟಿ ರೂಗೆ ಖರೀದಿ ಮಾಡಿದೆ.
ಹಾಗೇ ಶಿಖರ್ ಧವನ್ ಅವರನ್ನು 8.25 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.
ಇನ್ನೊಂದೆಡೆ ಮಾಯಂಕ್ ಅಗರ್ ವಾಲ್ ಅವರನ್ನು 14 ಕೋಟಿ ಮತ್ತು ಆಶ್ ದೀಪ್ ಅವರನ್ನು 4 ಕೋಟಿ ರೂಪಾಯಿಗೆ ರಿಟೇನ್ ಮಾಡಿಕೊಂಡಿತ್ತು.
ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕರ್ನಾಟಕ ಇಬ್ಬರು ಆಟಗಾರರು ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ಕೆ.ಎಲ್. ರಾಹುಲ್ ಅವರು ಲಕ್ನೊ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ವಿಪರ್ಯಾಸ ಅಂದ್ರೆ ನಮ್ಮ ಆರ್ ಸಿಬಿ ತಂಡಕ್ಕೆ ಕರ್ನಾಟಕದ ಆಟಗಾರರೇ ಸಿಗುತ್ತಿಲ್ಲ..!