ಮ್ಯಾಂಚೆಸ್ಟರ್ ಸಿಟಿ ಜಯ, ಎರ್ಲಿಂಗ್ ಹಾಲೆಂಡ್ ಅಬ್ಬರ
ಭರವಸೆಯ ಆಟಗಾರ ಎರ್ಲಿಂಗ್ ಹಾಲೆಂಡ್ ಮತ್ತು ಕೆವಿನ್ ಡಿ ಬ್ರೂಯ್ನ್ ಅವರ ಪ್ರದರ್ಶನದ ಬಲದಿಂದ ಮ್ಯಾಂಚೆಸ್ಟರ್ ಸಿಟಿ 3-1 ರಿಂದ ಬ್ರೈಟನ್ ತಂಡವನ್ನು ಮಣಿಸಿತು.
ಈ ಗೆಲುವಿನೊಂದಿಗೆ ಮ್ಯಾಂಚೆಸ್ಟರ್ ಸಿಟಿ ಆಡಿದ 11 ಪಂದ್ಯಗಳಲ್ಲಿ 8 ಗೆಲುವು, 2 ಡ್ರಾ, 1 ಸೋಲು ಕಂಡಿದ್ದು, 26 ಅಂಕಗಳೊಂದಿಗೆ ಪ್ರೀಮಿಯರ್ ಲೀಗ್ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಎರ್ಲಿಂಗ್ ಹಾಲೆಂಡ್ ಈ ಋತುವಿನಲ್ಲಿ 17 ಗೋಲು ಸಿಡಿಸಿದರು. ಎಡರ್ಸನ್ ಅವರ ಫ್ರೀ ಕಿಕ್‌ನಿಂದ ಹೊಲಾಂಡ್ ತಮ್ಮ ತಂಡಕ್ಕೆ ಮುನ್ನಡೆ ನೀಡಿದರು. ಚೆಂಡು ಮೈದಾನದ ಮಧ್ಯ ಭಾಗದಿಂದ ಬ್ರೈಟನ್ ಅವರ ಗೋಲು ಬಳಿ ಸಾಗುತ್ತಿದ್ದನ್ನು ನೋಡಿದ ಗೋಲಿ ಚೆಂಡನ್ನು ಹಿಡಿಯಲು ಮುಂದಕ್ಕೆ ಬಂದರು. ಇದೇ ಸಮಯ ಸದುಪಯೋಗ ಪಡಿಸಿಕೊಂಡ ಎರ್ಲಿಂಗ್ ಹಾಲೆಂಡ್ ಚೆಂಡಿನ ಮೇಲೆ ಹಿಡಿತ ಸಾಧಿಸಿ ಗೋಲು ಬಾರಿಸಿ, ಸಿಟಿ 1-0 ಮುನ್ನಡೆ ಸಾಧಿಸಲು ಕಾರಣರಾದರು.
ಇದೇ ಅವಧಿಯಲ್ಲಿ ಸಿಟಿಗೆ ಸಿಕ್ಕ ಪೆನಾಲ್ಟಿ ಕಿಕ್ ಅವಕಾಶದಲ್ಲಿ ಎರ್ಲಿಂಗ್ ಹಾಲೆಂಡ್ ಮತ್ತೊಮ್ಮೆ ಎದುರಾಳಿ ಗೋಲ್ ಕೀಪರ್ ಅವರನ್ನು ವಂಚಿಸಿದರು.

ಎರಡನೇ ಅವಧಿಯ 53ನೇ ನಿಮಿಷದಲ್ಲಿ ಬ್ರೈಟನ್, ಸಿಟಿ ಗೋಲ್ ಕೀಪರ್ ಅವರನ್ನು ವಂಚಿಸುವಲ್ಲಿ ಸಫಲವಾಯಿತು. ಪರಿಣಾಮ ಅಂತರ ಕಡಿಮೆ ಆಯಿತು.
ಆದರೆ ಇದೇ ಅವಧಿಯ 75ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿದಿ ಸಿಟಿ ಅಂತರವನ್ನು ವೃದ್ಧಿಸಿಕೊಂಡು, ಎದುರಾಳಿಗೆ ಶಾಕ್ ನೀಡಿತು. ಕೊನೆಯ ಕ್ಷಣದವರೆಗೂ ಗೋಲು ಬಾರಿಸಿ ಅಂತರವನ್ನು ಕಡಿಮೆ ಮಾಡುವ ಬ್ರೈಟನ್ ಆಸೆ ಫಲಿಸಲಿಲ್ಲ. ಪರಿಣಾಮ ಸೋಲು ಕಂಡಿತು.
Manchester City, Win, Erling Holland,