ಭಾರತದ ತಾರಾ ಆಟಗಾರ ಎಚ್.ಎಸ್.ಪ್ರಣಯ್ ಮಲೇಷ್ಯಾ ಮಾಸ್ಟ್ರ್ಸ್ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಮೊದಲ ಬಿಡಬ್ಲ್ಯು ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.
ಕೌಲಾಲಂಪುರದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಪ್ರಣಯ್ ಚೀನಾದ ವೆಂಗ್ ಹಾಂಗ್ ಯಾಂಗ್ ವಿರುದ್ಧು 21-19, 13-21, 21-18 ಅಂಕಗಳಿಂದ ಗೆದ್ದು ಬೀಗಿದರು. ಪ್ರಣಯ್ ಮತ್ತು ವೆಂಗ್ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾರೆ.
ಮೊದಲ ಸುತ್ತಿನಲ್ಲಿ ಪ್ರಣಯ್ 15-12 ಮುನ್ನಡೆಯಲಿದ್ದರು. ವೆಂಗ್ ಸತತ ಮೂರು ಅಂಗಳನ್ನು ಪಡೆದು ಅಂಕಗಳನ್ನು ಸಮಗೊಳಿಸಿದರು. ಎಚ್ಚೆತ್ತ ಪ್ರಣಯ್ ಎರಡು ಅಂಕಗಳನ್ನು ಪಡೆದು 21-19 ಅಂಕಗಳಿಂದ ಗೆದ್ದುಕೊಂಡರು.
ಎರಡನೆ ಸುತ್ತಿನಲ್ಲಿ ಇಬ್ಬರು ಆಟಗಾರರು ಅಂಕಗಳನ್ನು ಪಡೆಯಲು ಮುಗಿಬಿದ್ದರು. ವೆಂಗ್ 7 ಅಂಕಗಳ ಮುನ್ನಡೆ ಪಡೆದು 21-13 ಅಂಕಗಳಿಂದ ಗೆದ್ದರು.
ಮೂರನೆ ಸುತ್ತಿನಲ್ಲಿ ಪ್ರಣಯ್ 11-10 ಅಂಕಗಳಿಂದ ಮುನ್ನಡೆ ಪಡೆದರು. ನಂತರ 3 ಅಂಕಗಳನ್ನು ಪಡೆದು ಮುನ್ನಡೆ ಪಡೆದರು. ಫೋರ್ ಹ್ಯಾಂಡ್ ಸಹಾಯದಿಂದ ಒಂದು ಅಂಕ ಪಡೆದರು.
ನಿರ್ಣಾಯಕ ಹಂತದಲ್ಲಿ ಎರಡು ತಪ್ಪುಗಳನ್ನು ಮಾಡಿದ್ದರಿಂದ ವೆಂಗ್ 18-18 ಸಮಗೊಳಿಸುವಲ್ಲಿ ಯಶಸ್ವಿಯಾದರು.
ಈ ಹಂತದಲ್ಲಿ ಎಚ್ಚರಿಕೆಯಿಂದ ಪ್ರಣಯ್ ಸ್ಮ್ಯಾಶ್ಗಳ ಸಹಾಯದಿಂದ 2 ಅಂಕಗಳನ್ನು ಪಡೆದು ವಿಜಯಿಯಾದರು.
ಆರು ವರ್ಷ ಬಳಿಕ ಸಿಂಗಲ್ಸ್ ಗೆದ್ದ ಪ್ರಣಯ್
ಕಳೆದ ವರ್ಷ ಪ್ರತಿಷ್ಠಿತ ಥಾಮಸ್ ಕಪ್ ಗೆಲ್ಲುವಲ್ಲಿ ಪ್ರಣಯ್ ಪ್ರಮುಖ ಪಾತ್ರ ವಹಿಸಿದ್ದರು. 2017ರ ಯುಎಸ್ ಓಪನ್ ಗ್ರ್ಯಾಂಡ್ ಟೂರ್ನಿ ನಂತರ ವೈಯಕ್ತಿಕವಾಗಿ ಪ್ರಶಸ್ತಿ ಗೆದ್ದಿರಲಿಲ್ಲ. ಕಳೆದ ವರ್ಷ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಸನಿಹಕ್ಕೆ ಬಂದಿದ್ದರು. ಸ್ವಿಸ್ ಓಪನ್ ಟೂರ್ನಿಯಲ್ಲಿ ಫೈನಲ್, ಮಲೇಷ್ಯಾ ಮತ್ತು ಇಂಡೋನೇಷ್ಯಾ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ವರೆಗೂ ಆಡಿದ್ದರು.