ತಾರಾ ಶಟ್ಲರ್ ಎಚ್.ಎಸ್.ಪ್ರಣಯ್ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದಾರೆ. ಸಿಂಧು ಸೆಮಿಫೈನಲ್‍ನಲ್ಲಿ ಸೋತು ಮತ್ತೊಮ್ಮೆ ನಿರಾಸೆ ಅನುಭವಿಸಿದ್ದಾರೆ.
ಪುರುಷರ ಸಿಂಗಲ್ಸ್‍ನಲ್ಲಿ ಪ್ರಣಯ್ ಅಡಿನಾಟಾ ವಿರುದ್ಧ 19-7ಅಂಕಗಳಿಂದ ಗೆದ್ದರು. ಎದುರಾಳಿ ಅದಿನಾಟಾ ಆಡುವ ವೇಳೆ ಜಾರಿ ಬಿದ್ದು ನೋವಿನಿಂದ ನರಳಿ ಟೂರ್ನಿಯಿಂದ ಹೊರ ನಡೆದರು.
21ವರ್ಷದ ಆದಿಂತಾ, 2019 ವಿಶ್ವ ಜೂನಿಯರ್ ಚಾಂಪಿಯನ್‍ಶಿಪ್ ವಿಜೇತ ಚುರುತನದಿಂದ ಆಡಿದರು.
ಪ್ರಣಯ್ ಭಾನುವಾರ ಚೀನಾದ ವೆನಗ್ ಹಾಂಗ್ ಯಂಗ್ ಅಥವಾ ತೈಪೈನ ಲಿನ್ ಚುನ್ ಯೀ ವಿರುದ್ಧ ಸೆಣಸಲಿದ್ದಾರೆ.
ಈ ಋತುವಿನಲ್ಲಿ ಪ್ರಣಯ್ ಅವರದ್ದು ಮೊದಲ ಫೈನಲ್ ಆಗಿದೆ. ಕಳೆದ ರ್ವ ಸ್ವಿಸ್ ಓಪನ್ ಟೂರ್ನಿಯಲ್ಲಿ ರನ್ನರ್‍ಅಪ್ ಆಗಿದ್ದರು.
ಡಬಲ್ ಪದಕ ವಿಜೇತೆ ಪಿ.ವಿ.ಸಿಂಧು ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್‍ನಲ್ಲಿ ಇಂಡೋನೇಷ್ಯಾದ ಗ್ರೆಗೋರಿಯಾ ಮಾರಿಸ್ಕ ತುನ್‍ಜುಂಗ್ ವಿರುದ್ಧ 14-21, 17-21 ಅಂಕಗಳಿಂದ ಸೋತರು.
ಸಿಂಧು ಗ್ರೆಗೋರಿಯಾ ವಿರುದ್ಧ ಸತತ ಎರಡನ ಬಾರಿ ಸೋಲು ಕಂಡಿದ್ದಾರೆ.