ಐಪಿಎಲ್ನ ಅತ್ಯಂತ ದುಬಾರಿ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಮಾಲೀಕ ಸಂಜೀವ್ ಗೊಯೆಂಕಾ ದುಬಾರಿ ತಂಡವನ್ನುಕಟ್ಟಿದ್ದಾರೆ. ನಿರೀಕ್ಷೆಗಳ ಮೂಟೆಯ ಜೊತೆ ಕೆ.ಎಲ್. ರಾಹುಲ್ ತಂಡದ ನಾಯಕತ್ವವಹಿಸಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಧಾರ ವಿದೇಶಿ ಆಟಗಾರರು. ಹೀಗಾಗಿ ವಿದೇಶಿ ಆಟಗಾರರು ಲಭ್ಯರಾಗುವ ತನಕ ತಂಡ ಕಟ್ಟುವುದು ಸುಲಭದ ಮಾತಲ್ಲ. ಸುಮಾರು 5 ಆಟಗಾರರು ಮೊದಲ ವಾರದ ಆಟಕ್ಕೆ ಲಭ್ಯರಿರುವುದಿಲ್ಲ.
ಸಂಭಾವ್ಯ XI
-
ಕೆ.ಎಲ್. ರಾಹುಲ್
-
ಕ್ವಿಂಟಾನ್ ಡಿ ಕಾಕ್/ ಎವಿನ್ ಲೆವಿಸ್
-
ಕೈಲ್ ಮೇಯರ್ಸ್/ ಮಾರ್ಕಸ್ ಸ್ಟೋಯ್ನಿಸ್
-
ಮನೀಶ್ ಪಾಂಡೆ
-
ದೀಪಕ್ ಹೂಡ
-
ಕೃನಾಲ್ ಪಾಂಡ್ಯಾ
-
ಕೃಷ್ಣಪ್ಪ ಗೌತಮ್
-
ಜೇಸನ್ ಹೋಲ್ಡರ್
-
ದುಷ್ಮಂತ್ ಚಾಮಿರಾ
-
ರವಿ ಬಿಷ್ಣೋಯಿ
-
ಆವೇಶ್ ಖಾನ್
ನಾಯಕ ಕೆ.ಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯಬಹುದು. ಕ್ವಿಂಟಾನ್ ಡಿ ಕಾಕ್ ಲಭ್ಯರಾಗುವ ತನಕ ರಾಹುಲ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಎವಿನ್ ಲೆವಿಸ್ ಕೂಡ ಕಣಕ್ಕಿಳಿಯಬಹುದು. ಕೈಲ್ ಮೇಯರ್ಸ್ ಅಥವಾ ಮಾರ್ಕಸ್ ಸ್ಟೋಯ್ನಿಸ್ ಇಬ್ಬರಲ್ಲಿ ಒಬ್ಬರು ಸ್ಥಾನ ಪಡೆಯಬಹುದು. ಮನೀಷ್ ಪಾಂಡೆ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್. ದೀಪಕ್ ಹೂಡಾ, ಕೃನಾಲ್ ಪಾಂಡ್ಯಾ ಕೃಷ್ಣಪ್ಪ ಗೌತಮ್ ಮತ್ತು ಜೇಸನ್ ಹೋಲ್ಡರ್ 4 ಓವರ್ ಬೌಲಿಂಗ್ಜೊತೆ ಬ್ಯಾಟಿಂಗ್ ಮಾಡಬಲ್ಲ ಕ್ಷಮತೆ ಹೊಂದಿದ್ದಾರೆ. ದುಷ್ಮಂತ ಚಾಮೀರ, ರವಿ ಬಿಷ್ಣೋಯಿ ಮತ್ತು ಆವೇಶ್ ಖಾನ್ ಬೌಲಿಂಗ್ ಸ್ಪೆಷಲಿಸ್ಟ್ ಗಳು.
ಲಕ್ನೋ ತಂಡದ ಆಲ್ರೌಂಡರ್ ಪಂದ್ಯವನ್ನು ಯಾವ ಹಂತದಲ್ಲಿ ಬೇಕಾದರೂ ಬದಲಿಸಬಹುದಾದ ತಾಕತ್ತು ಹೊಂದಿದ್ದಾರೆ. ಇಷ್ಟಾದರೂ ಐಪಿಎಲ್ನಲ್ಲಿ ಆಟ ಅಂದುಕೊಂಡಷ್ಟು ಸುಲಭದಲ್ಲ ಅನ್ನುವುದು ನೆನಪಿನಲ್ಲಿರಬೇಕು.