5 ಬಾರಿಯ ಚಾಂಪಿಯನ್ ಮುಂಬೈ ತಂಡ ಯಾವ ಲೆಕ್ಕಾಚಾರ ಮಾಡಿದರೂ ಗೆಲುವು ಸಿಗುತ್ತಿಲ್ಲ. ಆಡಿದ 5 ಪಂದ್ಯಗಳ ಸೋಲಿನ ಬಳಿಕ ಮುಂಬೈ ಪ್ಲೇ-ಆಫ್ ಕನಸು ನುಚ್ಚುನೂರಾದ ಹಾಗೇ ಆಗಿದೆ. ಮತ್ತೊಂದು ಕಡೆಯಲ್ಲಿ ಲಖನೌ ಚೊಚ್ಚಲ ಐಪಿಎಲ್ ಟೂರ್ನಿ ಆಡಿದರೂ ಪ್ಲೇ-ಆಫ್ ಸ್ಪರ್ಧೆಯ ಫೈಟ್ನಲ್ಲಿದೆ. ಈ ಎರಡು ತಂಡಗಳು ಸೂಪರ್ ಶನಿವಾರದ ಮೊದಲ ಹೋರಾಟದಲ್ಲಿ ಬ್ರೆಬೋರ್ನ್ ಮೈದಾನದಲ್ಲಿ ಕಣಕ್ಕಿಳಿಯಲಿವೆ.
ಲಖನೌ ಶಕ್ತಿ:
ಲಖನೌ ತಂಡ ಸಾಂಘೀಕ ಹೋರಾಟ ಮಾಡುತ್ತಿದೆ. ನಾಯಕ ಕೆ.ಎಲ್. ರಾಹುಲ್ ಮತ್ತು ಕ್ವಿಂಟಾನ್ ಡಿ ಕಾಕ್ ಸ್ಥಿರ ಆಟ ಆಡದೇ ಇದ್ದರೂ ಉಳಿದ ಆಟಗಾರರು ಭರ್ಜರಿ ಆಟ ಆಡುತ್ತಿದ್ದಾರೆ. ಮಾರ್ಕಸ್ ಸ್ಟೋಯ್ನಿಸ್ ರನ್ನು ಮೂರನೇ ಕ್ರಮಾಂಕದಲ್ಲಿ ಆಡಲಿಳಿಸಿದರೆ ಬ್ಯಾಟಿಂಗ್ ಬಲ ಹೆಚ್ಚಾಗುತ್ತದೆ. ದೀಪಕ್ ಹೂಡಾ ಮತ್ತು ಆಯುಷ್ ಬಡೋನಿ 4 ಮತ್ತು 5ನೇ ಕ್ರಮಾಂಕದಲ್ಲಿ ಫಿಕ್ಸ್. ಕೃನಾಲ್ ಪಾಂಡ್ಯಾ ಮತ್ತು ಜೇಸನ್ ಹೋಲ್ಡರ್ 6 ಮತ್ತು 7ನೇ ಕ್ರಮಾಂಕದಲ್ಲಿ ಆಡಬಹುದು. ಕೃಷ್ಣಪ್ಪ ಗೌತಮ್ ಫ್ಲೋಟರ್ ರೀತಿಯಲ್ಲಿ ಎಲ್ಲಿ ಬೇಕಾದರೂ ಕಣಕ್ಕಿಳಿಯಬಹುದು. ದುಶ್ಮಂತ್ ಚಾಮೀರಾ, ರವಿ ಬಿಷ್ಣೋಯಿ ಮತ್ತು ಮೌಸಿನ್ ಖಾನ್ ಬೌಲಿಂಗ್ ಬಲ.
ಲಖನೌ ಬಳಿಕ ಬೌಲಿಂಗ್ ಆಯ್ಕೆ ಸಾಕಷ್ಟಿದೆ. ಚಾಮೀರಾ, ಮೌಸಿನ್ ಖಾನ್ ಮತ್ತು ಜೇಸನ್ ಹೋಲ್ಡರ್ ವೇಗದ ಆಪ್ಶನ್ ಗಳಾದರೆ, ಪಾಂಡ್ಯಾ, ಗೌತಮ್, ರವಿ ಬಿಷ್ಣೋಯಿ ಸ್ಪಿನ್ ಬೌಲರ್ಗಳು. ಮಾರ್ಕಸ್ ಸ್ಟೋಯ್ನಿಸ್ ಮತ್ತು ದೀಪಕ್ ಹೂಡಾ ಬೌಲಿಂಗ್ ಆಯ್ಕೆಯೂ ಲಭ್ಯವಿದೆ.
ಮಂಕಾದ ಮುಂಬೈ:
ಮುಂಬೈ ತಂಡ ಸತತ 5 ಸೋಲಿನ ಬಳಿಕ ಮಂಕಾಗಿದೆ. ಬ್ಯಾಟಿಂಗ್ಗಿಂತ ಬೌಲಿಂಗ್ ದೊಡ್ಡ ಹಿನ್ನಡೆಯಾಗಿ ಕಾಣುತ್ತಿದೆ. ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಅರಂಭದಲ್ಲೇ ಎಡವುತ್ತಿದ್ದಾರೆ. ಡಿವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ ಮತ್ತು ಸೂರ್ಯ ಕುಮಾರ್ ಯಾದವ್ ಬ್ಯಾಟಿಂಗ್ ಮೇಲೆ ಹೆಚ್ಚು ನಂಬಿಕೆ. ಕೈರಾನ್ ಪೊಲ್ಲಾರ್ಡ್ ಮಿಂಚಿದ್ರೆ ಮಿಂಚಿದ್ರು ಇಲ್ಲಾಂದರೆ ಇಲ್ಲ ಅನ್ನುವ ಹಾಗಾಗಿದೆ. ಜಸ್ ಪ್ರಿತ್ ಬುಮ್ರಾ, ಜಯದೇವ್ ಉನದ್ಕಟ್ ಮತ್ತು ಬಸಿಲ್ ಥಂಪಿ ವೇಗದ ಬೌಲರ್ಗಳು,. ಮುರುಗನ್ ಅಶ್ವಿನ್ ಬದಲು ಮಾಯಾಂಕ್ ಮಾರ್ಕಂಡೇ ಅಡಬಹುದು. ಫ್ಯಾಬಿಯನ್ ಅಲೆನ್ ಸೇರ್ಪಡೆ ಬ್ಯಾಟಿಂಗ್ ಜೊತೆ ಬೌಲಿಂಗ್ ಶಕ್ತಿಯನ್ನು ಹೆಚ್ಚಿಸಲಿದೆ. ಟಿಮ್ ಡೇವಿಡ್ಗೆ ಮತ್ತೊಂದು ಅವಕಾಶ ಕೊಟ್ಟರೂ ತಪ್ಪಿಲ್ಲ.
ಮುಂಬೈ ಬೌಲಿಂಗ್ ಸಖತ್ ವೀಕ್ ಆಗಿ ಕಾಣಿಸುತ್ತಿದೆ. ಬುಮ್ರಾ ಹಿಂದಿನ ಫಾರ್ಮ್ ನಲ್ಲಿಲ್ಲ. ಥಂಪಿ ಮತ್ತು ಉನದ್ಕಟ್ ಬಗ್ಗೆ ಹೆಚ್ಚು ನಂಬಿಕೆ ಇಲ್ಲ. ಲೆಗ್ ಸ್ಪಿನ್ ಆಯ್ಕೆ 4 ನೇ ಬೌಲಿಂಗ್ ಆಪ್ಶನ್. ಟಿಮ್ ಡೇವಿಡ್, ಪೊಲ್ಲಾರ್ಡ್ ಮತ್ತು ಅಲೆನ್ 5ನೇ ಬೌಲರ್ ಪಾತ್ರವನ್ನು ನಿಭಾಯಿಸಲೇಬೇಕು.
ಹೈ ಸ್ಕೋರ್ ತಾಣ:
ಬ್ರೆಬೋರ್ನ್ ಕ್ರೀಡಾಂಗಣ ದೊಡ್ಡ ಮೊತ್ತಕ್ಕೆ ಫೇಮಸ್. ಶನಿವಾರದ ಮೊದಲ ಪಂದ್ಯ ಇದಾಗಿರುವುದರಿಂದ ಡ್ಯೂ ಫ್ಯಾಕ್ಟರ್ ಭಯವಿಲ್ಲ.