ಪ್ಲೇ ಆಫ್ ಪ್ರವೇಶಕ್ಕೆ ಪೈಪೋಟಿ ಹೆಚ್ಚಾಗಿದ್ದು ಲಖನೌ ಸೂಪರ್ ಜೈಂಟ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 5 ರನ್ಗಳ ರೋಚಕ ಗೆಲುವು ಪಡೆದಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿ ಪ್ಲೇ ಆಫ್ ಸನಿಹಕ್ಕೆ ಸಾಗಿದೆ.
ಲಖನೌದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 177 ರನ್ ಕಲೆ ಹಾಕಿದೆ. ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು.
ಗೆಲ್ಲಲು 178 ರನ್ ಗುರಿ ಬೆನ್ನತ್ತಿದ ಮುಂಬೈ 9,3 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 90ರನ್ ಗಳಿಸಿತ್ತು. ಆದರೆ ರೋಹಿತ್ ಶರ್ಮಾ (59 ರನ್) ಔಟಾಗುತ್ತಿದ್ದಂತೆ ದಿಢೀರ್ ಕುಸಿತ ಕಂಡಿತು. ಇಶಾನ್ ಕಿಶನ್ (37ರನ್)ಸೂರ್ಯ ಕುಮಾರ್ (7) ಪೆವಿಲಿಯನ್ ಸೇರಿದರು. ಬ್ಯಾಟಿಂಗ್ ಕ್ರಮಾಂದ ಸಂಪೂರ್ಣ ಕುಸಿಯಿತು.ಕ್ಯಾಮರೊನ್ ಗ್ರೀನ್ಗೂ (6)ಮೊದಲು ನೇಹಲ್ ವಧೇರಾ (16) ಹಾಗೂ ವಿಷ್ಣು ವಿನೋದ್ ಅವರನ್ನು ಕಣಕ್ಕಿಸಿದ್ದು ಎಡವಟಾಯ್ತು. ಟಿಮ್ ಡೇವಿಡ್ 32 ರನ್ ಗಳಿಸಿದರು.
ಲಖನೌ ಯಶ್ ಠಾಕೂರ್ ಹಾಗು ವಿಷ್ಣು ವಿನೋದ್ ತಲಾ 2 ವಿಕೆಟ್ ಪಡೆದರು.ಮೊಹ್ಸಿನ್ ಖಾನ್ 1 ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಲಖನೌ 35ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು. ನಾಲ್ಕನೆ ವಿಕೆಟ್ಗೆ ಕೃಣಾಲ್ ಪಾಂಡ್ಯ (49) ಮತ್ತು ಮಾರ್ಕಸ್ ಸ್ಟೋಯ್ನಿಸ್ (ಅಜೇಯ 49) 72 ರನ್ ಸೇರಿಸಿ ಸ್ಕೋರ್ ಹೆಚ್ಚಿಸಿದರು. ನಿಕೊಲೊಸ್ ಪೂರಾನ್ ಅಜೇಯ8 ರನ್ ಗಳಿಸಿದರು.
ಜಾನಸ್ ಬೆಹ್ರನ್ ಡ್ರಾಫ್ 30ಕ್ಕೆ 2 ವಿಕೆಟ್ ಪಡೆದರು.