ರಿಂಕು ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ಸೋಲಿನ ದವಡೆಯಿಂದ ಪಾರಾದ ಲಖನೌ ಒಂದು ರನ್ಗಳ ರೋಚಕ ಗೆಲುವಿನೊಂದಿಗೆ ಸತತ ಎರಡನೆ ಬಾರಿ ಪ್ಲೇ ಆಫ್ ಪ್ರವೇಶಿಸಿದೆ. ಲೀಗ್ ಹಂತವನ್ನು 3ನೇ ಸ್ಥಾನದೊಂದಿಗೆ ಮುಕ್ತಾಯಗೊಳಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಲಖನೌ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 176 ರನ್ ಕಲೆ ಹಾಕಿತು.ಕೋಲ್ಕತ್ತಾ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
ಕೋಲ್ಕತ್ತಾ ಪರ ಜಾಸನ್ ರಾಯ್ 45, ರಿಂಕು ಸಿಂಗ್ ಅಜೇಯ 67,ವೆಂಕಟೇಶ್ ಅಯ್ಯರ್ 23, ರೆಹಮಾನ್ ಹುಲ್ಲಾ ಗುರ್ಬಾಜ್ 10 ರನ್ ಗಳಿಸಿದರು.
ಲಖನೌ ಪರ ಯಶ್ ಠಾಕೂರ್ , ರವಿ ಬಿಷ್ಣೋಯಿ ತಲಾ ವಿಕೆಟ್ ಪಡೆದರು.
ಇದಕ್ಕೂ ಮುನ್ನ ಲಖನೌ ಪರ ಕ್ವಿಂಟಾನ್ ಡಿಕಾಕ್ 28, ನಿಕೊಲೊಸ್ ಪೂರಾನ್ 58, ಬದೋನಿ 25 ರನ್ ಹೊಡೆದರು.
ಕೆಕೆಆರ್ ಪರ ವೈಭವ್ ಅರೊರಾ, ಶಾರ್ದೂಲ್ ಠಾಕೂರ್ ಹಾಗೂ ಸುನಿಲ್ ನರೈನ್ ತಲಾ 2 ವಿಕಟ್ ಪಡೆದರು.