ಟೀಮ್ ಇಂಡಿಯಾ ವಿರುದ್ಧ ನಿರ್ಣಾಯಕ ಮೂರನೆ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹೀನಾಯವಾಗಿ ಸೋಲು ಕಂಡಿದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಕದನದಲ್ಲಿ ಭಾರತದ ಸ್ಪಿನ್ ದಾಳಿಗೆ ದಕ್ಷಿಣ ಆಫ್ರಿಕಾ ಪತರಗುಟ್ಟಿ ಹೋಯ್ತು. 27.1 ಓವರ್ ಗಳಲ್ಲಿ 99 ರನ್ ಗಳಿಗೆ ಹರಿಣಗಳು ಸರ್ವಪತನ ಕಂಡಿತು.
ಇದರೊಂದಿಗೆ ಏಕದಿನ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ನಾಲ್ಕನೆ ಬಾರಿಗೆ ನೂರರೊಳಗೆ ಆಲೌಟ್ ಆಯಿತು. ವಿಶ್ವ ಕ್ರಿಕೆಟ್ನಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದರೂ ಅನಗತ್ಯ ದಾಖಲೆಯನ್ನ ಬರೆಯಿತು.
1999ರಲ್ಲಿ ನೈರೋಬಿಯಲ್ಲಿ ದಕ್ಷಿಣ ಆಫ್ರಿಕಾ ಭಾರತ ವಿರುದ್ಧ 117 ರನ್ ಗಳಿಸಿತ್ತು.
ಇನ್ನು ನೂರರೊಳಗೆ 1993ರಲ್ಲಿ ಆಸ್ಟ್ರೇಲಿಯಾ ವಿರುದ್ಧ 69 ರನ್ ಗಳಿಗೆ ಆಲೌಟ್ ಆಗಿತ್ತು. 2008ರಲ್ಲಿ ಇಂಗ್ಲೆಂಡ್ ವಿರುದ್ಧ 83ಕ್ಕೆ ಆಲೌಟ್ ಆಗಿತ್ತು.ಈ ವರ್ಷ ಇಂಗ್ಲೆಂಡ್ ವಿರುದ್ಧ 83 ರನ್ ಗಳಿಗೆ ಅಲೌಟ್ ಆಗಿತ್ತು.
ಇದೀಗ ಟಿಮ್ ಇಂಡಿಯಾ ವಿರುದ್ಧವೂ ನೂರರೊಳಗೆ ಆಲೌಟ್ ಆಗಿ ವಿಶ್ವ ಕ್ರಿಕೆಟ್ ಸೌತ್ ಆಫ್ರಿಕಾ ಮತ್ತೆ ಸುದ್ದಿಯಲ್ಲಿದೆ.