ಸೂಪರ್ ಶನಿವಾರದ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ ಅಖಾಡಕ್ಕೆ ಇಳಿಯಲಿದೆ. ಕೆಕೆಆರ್ಗೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡವಿದೆ. ಗುಜರಾತ್ ಅಗ್ರಸ್ಥಾನಕ್ಕೇರುವ ಲೆಕ್ಕಹಾಕಿದೆ. ಆದರೆ ಈ ಪಂದ್ಯದಲ್ಲಿನ ಅಂಕಿ ಸಂಖ್ಯೆಗಳ ಲೆಕ್ಕ ವಿಚಿತ್ರವಾದರೂ ಸತ್ಯ.
ಶ್ರೇಯಸ್ಗೆ ಲೆಗ್ ಸ್ಪಿನ್ ಟ್ರಬಲ್..!
ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ಗೂ ಲೆಗ್ ಸ್ಪಿನ್ನರ್ ಗಳಿಗೂ ಆಗಿಬರುವುದಿಲ್ಲ. 2019ರಿಂದ ಶ್ರೇಯಸ್ 14 ಬಾರಿ ಲೆಗ್ ಸ್ಪಿನ್ನರ್ಗಳಿಗೆ ಬಲಿಯಾಗಿದ್ದಾರೆ. ಲೆಗ್ ಸ್ಪಿನ್ನರ್ಗಳ ಮುಂದೆ ಶ್ರೇಯಸ್ ಸರಾಸರಿ ಕೇವಲ 17.35ರಷ್ಟಿದೆ. ಸ್ಟ್ರೈಕ್ ರೇಟ್ 109.45.
ಶ್ರೇಯಸ್ ಅಯ್ಯರ್ ರಶೀದ್ ಖಾನ್ ವಿರುದ್ಧ 2 ಬಾರಿ ಔಟಾಗಿದ್ದಾರೆ. ಅಷ್ಟೇ ಅಲ್ಲ 55 ಎಸೆತಗಳಲ್ಲಿ ಕೇವಲ 51 ರನ್ ಕಲೆಹಾಕಿದ್ದಾರೆ.
ಸಿಕ್ಸರ್ ಲೆಕ್ಕ:
- ಈ ಬಾರಿಯ ಐಪಿಎಲ್ನಲ್ಲಿ ಸಿಕ್ಸರ್ ಬಾರಿಸುವುದು ಸುಲಭವಾಗಿದೆ. ಆದರೆ ಗುಜರಾತ್ ಟೈಟಾನ್ಸ್ ಕೇವಲ 32 ಸಿಕ್ಸರ್ ಗಳನ್ನು ಮಾತ್ರ ಬಾರಿಸಿದೆ.
- ಡೇವಿಡ್ ಮಿಲ್ಲರ್, ನಿತೀಶ್ ರಾಣಾ ಮತ್ತು ಶ್ರೇಯಸ್ ಅಯ್ಯರ್ 100 ಸಿಕ್ಸರ್ಗಳ ಗಡಿಯಲ್ಲಿದ್ದಾರೆ. ಮಿಲ್ಲರ್ 99 ಸಿಕ್ಸರ್ ಬಾರಿಸಿದ್ದರೆ, ರಾಣಾ 98 ಸಿಕ್ಸರ್ ಸಿಡಿಸಿದ್ದಾರೆ. ಅಯ್ಯರ್ 94 ಸಿಕ್ಸರ್ ಬಾರಿಸಿದ್ದಾರೆ.
- ಗುಜರಾತ್ ಟೈಟಾನ್ಸ್ ಲೆಗ್ ಸ್ಪಿನ್ನರ್ ರಶೀದ್ ಖಾನ್ 1 ವಿಕೆಟ್ ಪಡೆದರೆ ಐಪಿಎಲ್ನಲ್ಲಿ 100 ವಿಕೆಟ್ ಪಡೆದ 17ನೇ ಬೌಲರ್ ಆಗಿ ದಾಖಲೆ ಪುಟ ಸೇರಿಕೊಳ್ಳಲಿದ್ದಾರೆ.