ವಿಶ್ವಕಪ್ ವಿಜೇತ ಲಿಯೊನೆಲ್ ಮಸ್ಸಿಗೆ ಪ್ಯಾರಿಸ್ ವಿಮಾನ್ ನಿಲ್ದಾಣದಲ್ಲಿ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ.
ಎಲ್ ಗ್ರಾಫಿಕ್ಕೊ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಪ್ಯಾರೀಸ್ ಏರ್ ಪೋರ್ಟ್ ಹೊರಗೆ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ನೋಡಲು ಹೊರ ಕಾಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಮೆಸ್ಸಿ ಬಂದ ಕೂಡಲೆ ಪಠಾಕಿ ಸಿಡಿಸಿ ಸ್ವಾಗತಿಸಲಾಯಿತು. ಪಿಎಸ್ ಜಿ ತಂಡದ ಪರ ಕ್ಲಬ್ ಫುಟ್ಬಾಲ್ ಆಡಲು ಮೆಸ್ಸಿ ಬಂದಿದ್ದಾರೆ.
ಕಳೆದ ವಾರ ಪಿಎಸ್ ಜಿ ತಂಡ ಋತುವಿನಲ್ಲಿ ಮೊದಲ ಸೋಲು ಕಂಡಿತ್ತು. ಆದರೂ ಪಿಎಸ್ ಜಿ ತಂಡ ಅಂಕಪಟ್ಟಿಯಲ್ಲಿ 44 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
ತಂಡದ ಸೋಲಿಗೆ ಲಿಯೊನೆಲ್ ಮೆಸ್ಸಿ ಅನುಪಸ್ಥಿತಿ ಕಾರಣ ಎಂದು ಡಿಫೆಂಡರ್ ಮೆಡಿನಾ ಹೇಳಿದ್ದರು. ಮೆಸ್ಸಿ ಅವರೊಂದಿಗೆ ಆಡುವುದನ್ನು ಆನಂದಿಸಬೇಕೆಂದದ್ದಾರೆ.
ಮೆಸ್ಸಿ ವಿಶ್ವಕಪ್ ತೋರಿದ ಪ್ರದರ್ಶನವನ್ನೆ ಇಲ್ಲಿ ಮುಂದುವರೆಸುತ್ತಾರೆ ಎನ್ನುವ ನಂಬಿಕೆ ಇದೆ. ನಾವು ಅವರ ಆಟವನ್ನು ಆನಂದಿಸಿದೆವು ಎಂದು ಹೇಳಿದ್ದಾರೆ.