K.L. Rahul – ಕೆ.ಎಲ್. ರಾಹುಲ್ ದೊಡ್ಡತನ.. ಬಾಲಕನ ಜೀವ ಉಳಿಸಲು ಆರ್ಥಿಕ ನೆರವು..!

ಕೆ.ಎಲ್. ರಾಹುಲ್.. ಆಟದ ಜೊತೆ ಸ್ವಲ್ಪ ವಿವಾದ, ಗಾಸಿಪ್ ಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದರು. ಆದ್ರೆ ಈಗ ಕೆ.ಎಲ್. ರಾಹುಲ್ ಅವರು ತನ್ನ ಮಾನವಿಯತೆಯ ಗುಣಗಳಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಹಾಗಂತ ಕೆ.ಎಲ್. ರಾಹುಲ್ ಅವರು ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವುದು ಇದೇನೂ ಮೊದಲಲ್ಲ. ಹೆಚ್ಚು ಪ್ರಚಾರವನ್ನು ಬಯಸದೇ ಕೆ.ಎಲ್. ರಾಹುಲ್ ದಾನ ಧರ್ಮಗಳನ್ನು ಮಾಡುತ್ತಿರುತ್ತಾರೆ.
ಇದೀಗ ಕೆ.ಎಲ್. ರಾಹುಲ್ ಅವರು 11 ವರ್ಷದ ಬಾಲಕನ ಜೀವ ಉಳಿಸಿದ್ದಾರೆ.
ವರದ್ ನಲ್ವಾಡೆ ಎಂಬ 11 ವರ್ಷದ ಬಾಲಕ ಅಪ್ಲ್ಯಾಸ್ಟಿಕ್ ಅನೀಮಿಯಾ ಎಂಬ ಖಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಕಳೆದ ಸೆಪ್ಟಂಬರ್ ನಿಂದ ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಈ ಖಾಯಿಲೆಯ ಚಿಕಿತ್ಸೆಗೆ ಸುಮಾರು 35 ಲಕ್ಷ ರೂಪಾಯಿ ಬೇಕಾಗಿತ್ತು. ವರದ್ ನಲ್ವಾಡೆಯ ಹೆತ್ತವರು ಮಗನನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದರು. ವೃತ್ತಿಯಲ್ಲಿ ವಿಮಾ ಕಂಪೆನಿಯ ಏಜೆಂಟ್ ಆಗಿರುವ ವರದ ನೆಲ್ವಾಡೆಯ ತಂದೆ ಸಚಿನ್ ಮತ್ತು ತಾಯಿ ಸ್ವಪ್ನ ಚಿಕಿತ್ಸೆಗಾಗಿ ಎನ್ ಜಿ ಒ ಮೂಲಕ ದೇಣಿಗೆ ಸಂಗ್ರಹ ಅಭಿಯಾನ ಮಾಡುತ್ತಿದ್ದರು.
ಈ ವಿಷಯವನ್ನು ತಿಳಿದ ತಕ್ಷಣ ಕೆ. ಎಲ್. ರಾಹುಲ್ 31 ಲಕ್ಷ ರೂಪಾಯಿ ದೇಣಿಗೆ ನೀಡಿ ಬಾಲಕನ ಜೀವವನ್ನು ಉಳಿಸಲು ನೆರವಾಗಿದ್ದಾರೆ.
https://twitter.com/i/status/1496095821926137868
ಕೆ.ಎಲ್. ರಾಹುಲ್ ಹೃದಯವಂತಿಕೆಗೆ ವರದ ನಲ್ವಾಡೆ ಅವರ ಹೆತ್ತವರು ಧನ್ಯವಾದಗಳನ್ನು ಹೇಳಿದ್ದಾರೆ.
ಇನ್ನೊಂದೆಡೆ ವರದ್ ನಲ್ವಾಡೆಯ ಚಿಕಿತ್ಸೆ ಯಶಸ್ವಿಯಾಗಿರುವುದಕ್ಕೆ ಕೆ.ಎಲ್. ರಾಹುಲ್ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಅಗತ್ಯ ನೆರವು ಬೇಕಾದವರಿಗೆ ಸಹಾಯ ಮಾಡಲು ಇದು ಪ್ರೇರಣೆ ನೀಡಲಿದೆ ಎಂದು ಕೆ.ಎಲ್. ರಾಹುಲ್ ಹೇಳಿದ್ದಾರೆ.KL Rahul Saviour’s Act Saves Life Of Young Aspiring Cricketer
ಕೆ. ಎಲ್. ರಾಹುಲ್ ಟೀಮ್ ಇಂಡಿಯಾದ ಪ್ರಮುಖ ಆಟಗಾರನಾಗಿದ್ದಾರೆ. ಇತ್ತೀಚೆಗೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕನಾಗಿದ್ದರು. ಅಲ್ಲದೆ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಾರಥಿ ಕೂಡ ಆಗಿದ್ದಾರೆ.