ಸ್ಪೋಟಕ ಬ್ಯಾಟಿಂಗ್ನಿಂದಲೇ ವಿಶ್ವ ಕ್ರಿಕೆಟ್ನಲ್ಲಿ ಅಬ್ಬರಿಸಿರುವ ಕೆ.ಎಲ್. ರಾಹುಲ್, ಮತ್ತೊಂದು ಮೈಲುಗಲ್ಲು ದಾಟಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ವೇಗವಾಗಿ 6 ಸಾವಿರ ರನ್ ಪೂರೈಸಿರುವ ಕನ್ನಡಿಗ, ಅತಿ ಕಡಿಮೆ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿರುವ ಭಾರತದ ಮೊದಲ ಹಾಗೂ ವಿಶ್ವದ 3ನೇ ಆಟಗಾರ ಎನಿಸಿದ್ದಾರೆ.
15ನೇ ಆವೃತ್ತಿಯ ಐಪಿಎಲ್ನಲ್ಲಿ ಕೆ.ಎಲ್. ರಾಹುಲ್, ಭರ್ಜರಿ ಫಾರ್ಮ್ನಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 30 ರನ್ಗಳಿಸಿದ ರಾಹುಲ್, ತಮ್ಮ 166ನೇ ಇನ್ನಿಂಗ್ಸ್ನಲ್ಲಿ ಆರು ಸಾವಿರ ರನ್ಗಳ ಗಡಿದಾಟಿದರು. ಆ ಮೂಲಕ ಟಿ20 ಕ್ರಿಕೆಟ್ನಲ್ಲಿ ವೇಗವಾಗಿ ಈ ಗುರಿ ಮುಟ್ಟಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಪಡೆದರು.
ಭಾರತದ ಮೊದಲ ಆಟಗಾರ:
ಟಿ20ಯಲ್ಲಿ ಕಡಿಮೆ ಇನ್ನಿಂಗ್ಸ್ನಲ್ಲಿ 6 ಸಾವಿರ ರನ್ಗಳಿಸಿದವರ ಪಟ್ಟಿಯಲ್ಲಿ ಕೆ.ಎಲ್.ರಾಹುಲ್(166 ಇನ್ನಿಂಗ್ಸ್) ಮೊದಲ ಸ್ಥಾನದಲ್ಲಿದ್ದರೆ. ನಂತರದಲ್ಲಿ ವಿರಾಟ್ ಕೊಹ್ಲಿ(183 ಇನ್ನಿಂಗ್ಸ್), ಶಿಖರ್ ಧವನ್(213 ಇನ್ನಿಂಗ್ಸ್), ಸುರೇಶ್ ರೈನಾ(216 ಇನ್ನಿಂಗ್ಸ್) ಹಾಗೂ ರೋಹಿತ್ ಶರ್ಮ(223 ಇನ್ನಿಂಗ್ಸ್) ಟಿ20ಯಲ್ಲಿ ಕಡಿಮೆ ಇನ್ನಿಂಗ್ಸ್ಗಳಲ್ಲಿ 6 ಸಾವಿರ ರನ್ಗಳಿಸಿದ್ದಾರೆ.
ವಿಶ್ವದ 3ನೇ ಬ್ಯಾಟ್ಸ್ಮನ್:
ವಿಶ್ವ ಕ್ರಿಕೆಟ್ನಲ್ಲಿ ಕಡಿಮೆ ಇನ್ನಿಂಗ್ಸ್ನಲ್ಲಿ 6 ಸಾವಿರ ರನ್ ಪೂರೈಸಿದವರ ಪಟ್ಟಿಯಲ್ಲಿ ಕೆ.ಎಲ್.ರಾಹುಲ್, 3ನೇ ಸ್ಥಾನದಲ್ಲಿದ್ದಾರೆ. 162 ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿರುವ ಕ್ರಿಸ್ ಗೇಯ್ಲ್ ನಂ.1 ಸ್ಥಾನದಲ್ಲಿದ್ದರೆ. ಪಾಕಿಸ್ತಾನದ ಬಾಬರ್ ಆಜಂ(165 ಇನ್ನಿಂಗ್ಸ್) 2ನೇ ಸ್ಥಾನದಲ್ಲಿ ಹಾಗೂ 166 ಇನ್ನಿಂಗ್ಸ್ನಲ್ಲಿ 6 ಸಾವಿರ ರನ್ಗಳಿಸಿರುವ ರಾಹುಲ್ 3ನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ 2022ರಲ್ಲಿ:
2022ರ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕೆ.ಎಲ್. ರಾಹುಲ್, 7 ಇನ್ನಿಂಗ್ಸ್ನಲ್ಲಿ 44.17ರ ಸರಾಸರಿ ಹಾಗೂ 141.71ರ ಸ್ಟ್ರೈಕ್ ರೇಟ್ನಲ್ಲಿ 265 ರನ್ಗಳಿಸಿದ್ದಾರೆ. ಈಗಾಗಲೇ ಆರೆಂಜ್ ಕ್ಯಾಪ್ ರೇಸ್ನಲ್ಲಿರುವ ರಾಹುಲ್, ಪ್ರಸಕ್ತ ಸೀಸನ್ನಲ್ಲಿ 1 ಅರ್ಧಶತಕ ಹಾಗೂ 1 ಶತಕಗಳಿಸಿದ್ದಾರೆ.