ಬೆಂಗಳೂರು ಎಫ್ಸಿ ವಿರುದ್ಧದ ಐಎಸ್ಎಲ್ ಪ್ಲೇ ಆಫ್ ಪಂದ್ಯದಲ್ಲಿ ಅರ್ಧದಲ್ಲೆ ಮೈದಾನ
ತೊರೆದಿದ್ದ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಭಾರತೀಯ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಶಿಸ್ತು ಸಮಿತಿ 4 ಕೋಟಿ ರೂ. ದಂಡ ವಿಧಿಸಿದೆ.
ಮಾ.3ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಸುನಿಲ್ ಚೆಟ್ರಿ ಹೊಡೆದ ಪ್ರೀಕಿಕ್ ಗೋಲನ್ನು ವಿರೋಧಿಸಿ ಬ್ಲಾಸ್ಟರ್ಸ್ ತಂಡದ ಆಟಗಾರರು ಪಂದ್ಯವನ್ನು ಅರ್ಧದಲ್ಲೇ ಬಿಟ್ಟು ತೆರೆಳಿದ್ದರು. ಪಂದ್ಯ ನಿಂತು ಹೋಗಿತ್ತು. ಬೆಂಗಳೂರು ಎಫ್ಸಿ ಸೆಮಿಫೈನಲ್ಗೇರಿತ್ತು.
ಜೊತೆಗೆ 10 ದಿನಗಳ ಒಳಗೆ ಬಹಿರಂಗ ಕ್ಷಮೆಯಾಚಿಸುವಂತೆ ಆದೇಶಿಸಿರುವ ಎಐಎಫ್ಎಫ್ ಆದೇಶ ಉಲ್ಲಂಘಿಸಿದರೆ 6 ಕೋಟಿ ರೂ. ದಂಡ ಪಾವತಿಸಬೇಕಾಗುತ್ತದೆ
ಎಂದು ಹೇಳಿದೆ. ಅಲ್ಲದೇ ಕೋಚ್ ಇವಾನ್ ವಕೊಮನೋವಿಚ್ರನ್ನು ಎಐಎಫ್ಎಫ್ ಆಯೋಜಿಸರುವ 10 ಪಂದ್ಯಗಳಿಂದ ಅಮಾನತು ಮಾಡಿದೆ. ಜತೆಗೆ 5 ಲಕ್ಷ ರೂ. ದಂಡ ಪಾವತಿಸಲು ಸೂಚಿಸಿ ಬಹಿರಂಗ ಕ್ಷಮೆಯಾಚೆನೆಗೂ ಆದೇಶಿಸಿದೆ. ಆದರೆ ಶಿಸ್ತು ಸಮಿತಿ ಆದೇಶದ ವಿರುದ್ಧ ಕೇರಳ ಬ್ಲಾಸ್ಟರ್ಸ್ ಎಐಎಫ್ಎಫ್ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ.