ಬೆಂಗಳೂರು ಎಫ್ಸಿ ವಿರುದ್ಧದ ಪಂದ್ಯದ ವೇಳೆ ಕೇರಳ ಬ್ಲಾಸ್ಟರ್ಸ್ ತಂಡ ವಾಕ್ ಔಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲ್ ಇಂಡಿಯಾ ಪುಟ್ಬಾಲ್ ಫೆಡರೇಶನ್‍ನ ಶಿಸ್ತು ಸಮಿತಿ (ಎಐಎಫ್ಎಫ್ಡಿಸಿ) ತನಿಖೆ ಆರಂಭಿಸಿದೆ .
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಹೆಚ್ಚುವರಿ ನಿಮಿಷದಲ್ಲಿ ಫ್ರಿಕಿಕ್ ಅವಕಾಶ ಪಡೆದ ಬೆಂಗಳೂರು ಎಫ್ಸಿ ಸುನಿಲ್ ಚೆಟ್ರಿ ನೆರವಿನಿಂದ ಗೋಲು ಹೊಡೆದಿತ್ತು. ಗೋಲು ಹೊಡೆಯುವಾಗ ಕೇರಳ ತಂಡದ ಗೋಲ್ ಕೀಪರ್ ತಮ್ಮ ಸ್ಥಳದಲ್ಲಿ ಇರಲಿಲ್ಲ ಅನ್ನೋದು ವಿವಾದಾತ್ಮಕ ವಿಷಯವಾಯಿತು.
ಈ ಪ್ರಕರಣದಿಂದ ಅಸಮಾಧಾನಗೊಂಡ ಕೇರಳ ಬ್ಲಾಸ್ಟರ್ಸ್ ತಂಡ ಮೈದಾನದಿಂದ ಹೊರ ನಡೆಯಿತು.
ಕೇರಳ ಬ್ಲಾಸ್ಟರ್ಸ್ ತಂಡ ಪಂದ್ಯವನ್ನು ಮತ್ತೆ ಆಡಿಸಬೇಕು ಮತ್ತು ರೆಫರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಐಎಫ್ಎಫ್ಡಿಸಿಗೆ ಮನವಿ ಸಲ್ಲಿಸಿತ್ತು. ಎಐಎಫ್ಎಫ್ಸಿ ಸಮಿತಿ ಈ ಮನವಿಯನ್ನು ತಿರಸ್ಕರಿಸಿದೆ.
ಶಿಸ್ತು ಕ್ರಮಕ್ಕೆ ಮುಂದಾಗಿರುವ ಎಐಎಫ್ಎಫ್ಡಿಸಿ ಸುನಿಲ್ ಚೆಟ್ರಿ ಹೊಡೆದ ವಿವಾದಾತ್ಮಕ ಗೋಲಿನಿಂದಾಗಿ ಹೊರ ನಡೆದಿದ್ದ ಅಥವಾ ಬೇರೆ ಕಾರಣಗಳಿಂದ ಹೊರ ನಡೆದ್ದಿದ್ದ ಎಂಬುದರ ಬಗ್ಗೆ ತನಿಖೆ ನಡೆಸಲಿದೆ.
ಶಿಸ್ತು ಸಮಿತಿ ಈಗಾಗಲೇ ಕೇರಳ ಬ್ಲಾಸ್ಟರ್ಸ್ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಇನ್ನು 10 ದಿನದೊಳಗೆ ಎಲ್ಲವೂ ತಿಳಿಯಲಿದೆ ಎಂದು ತಿಳಿದು ಬಂದಿದೆ. ಪ್ರತಿಭಟಿಸದಕ್ಕೆ ಶಿಕ್ಷೆ ಆಗಲಿದೆ ಶಿಕ್ಷೆಯ ಪ್ರಮಾಣ ಗೊತ್ತಾಗಬೇಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.