ಕರೀಮ್ ಬೆಂಜೆಮಾ ಮುಡಿಗೆ ಬ್ಯಾಲನ್ ಡಿ’ಓರ್ ಪ್ರಶಸ್ತಿ
ಫ್ರೆಂಚ್ ಸ್ಟ್ರೈಕರ್ ಕರೀಮ್ ಬೆಂಜೆಮಾ ಅವರು ಫುಟ್ಬಾಲ್ನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಬ್ಯಾಲನ್ ಡಿ’ಓರ್ ಪಡೆದಿದ್ದಾರೆ. ಮಂಗಳವಾರ ಪ್ಯಾರಿಸ್ನ ಥಿಯೇಟ್ರೆ ಡು ಚಾಟೆಲೆಟ್ನಲ್ಲಿ ನಡೆದ ಸಮಾರಂಭದಲ್ಲಿ 34 ವರ್ಷದ ಬೆಂಜೆಮಾ ಅವರಿಗೆ ಬ್ಯಾಲನ್ ಡಿ’ಒರ್ 2022 ಪ್ರಶಸ್ತಿಯನ್ನು ನೀಡಲಾಯಿತು.
ಅಚ್ಚರಿಯ ಸಂಗತಿಯೆಂದರೆ, ಪೋರ್ಚುಗಲ್ನ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಅರ್ಜೆಂಟೀನಾದ ದಂತಕಥೆ ಲಿಯೋನೆಲ್ ಮೆಸ್ಸಿ ಪ್ರಶಸ್ತಿ ಶ್ರೇಯಾಂಕದ ಟಾಪ್-10 ರೊಳಗೆ ಸಹ ಸ್ಥಾನ ಪಡೆಯಲಿಲ್ಲ.
24 ವರ್ಷಗಳ ನಂತರ, ಫ್ರೆಂಚ್ ಫುಟ್ಬಾಲ್ ಆಟಗಾರನಿಗೆ ಈ ಪ್ರಶಸ್ತಿ ಲಭಿಸಿದೆ. ಬೆಜೆನ್ಮಾ ಮೊದಲು, 1998 ರಲ್ಲಿ, ಶ್ರೇಷ್ಠ ಫ್ರೆಂಚ್ ಫುಟ್ಬಾಲ್ ಆಟಗಾರ ಜಿನೆಡಿನ್ ಜಿಡಾನೆ ಬ್ಯಾಲನ್ ಡಿ’ಓರ್ ಪಡೆದರು. ಬೆಜೆನ್ಮಾ ಈ ಪ್ರಶಸ್ತಿಯನ್ನು ಪಡೆದ 5 ನೇ ಫ್ರೆಂಚ್ ಫುಟ್ಬಾಲ್ ಆಟಗಾರರಾಗಿದ್ದಾರೆ.
ಕಳೆದ ಋತುವಿನಲ್ಲಿ ರಿಯಲ್ ಮ್ಯಾಡ್ರಿಡ್ನೊಂದಿಗೆ ಲಾ ಲಿಗಾ ಮತ್ತು ಚಾಂಪಿಯನ್ಸ್ ಲೀಗ್ ಅನ್ನು ಗೆದ್ದ ನಂತರ ಬೆಂಜೆಮಾ ಈ ವರ್ಷ ಪ್ರಶಸ್ತಿಯನ್ನು ಗೆದ್ದ ಸಾರ್ವಕಾಲಿಕ ನೆಚ್ಚಿನ ಫುಟ್ಬಾಲ್ ಆಟಗಾರರಾಗಿದ್ದರು.
ಕಳೆದ 13 ಪ್ರಶಸ್ತಿಗಳಲ್ಲಿ 12 ಪ್ರಶಸ್ತಿ ಅರ್ಜೆಂಟೀನಾದ ದಂತಕಥೆ ಲಿಯೋನೆಲ್ ಮೆಸ್ಸಿ ಮತ್ತು ಪೋರ್ಚುಗಲ್ನ ಕ್ರಿಸ್ಟಿಯಾನೊ ರೊನಾಲ್ಡೊ ಪಡೆದಿದ್ದಾರೆ. ಮೆಸ್ಸಿ 7 ಮತ್ತು ರೊನಾಲ್ಡೊ 5 ಬಾರಿ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಲುಕಾ ಮೊಡ್ರಿಕ್ ಈ ಪ್ರಶಸ್ತಿಯನ್ನು 2018 ರಲ್ಲಿ ಮಾತ್ರ ಪಡೆದಿದ್ದರು.
ಬೆಜೆನ್ಮಾ ಅವರು 1956 ರಿಂದ ಹಿರಿಯ ಬ್ಯಾಲನ್ ಡಿ’ಓರ್ ವಿಜೇತರಾದರು. ಅವರಿಗಿಂತ ಮೊದಲು, ಇಂಗ್ಲೆಂಡ್ ದಂತಕಥೆ ಸರ್ ಸ್ಟಾನ್ಲಿ ಮ್ಯಾಥ್ಯೂಸ್ 41 ನೇ ವಯಸ್ಸಿನಲ್ಲಿ ಈ ಪ್ರಶಸ್ತಿಯನ್ನು ಗೆದ್ದರು, ಆದರೆ ಬೆಜೆನ್ಮಾ ಅವರಿಗೆ 34 ವರ್ಷ.
ಬೆಂಜೆಮಾ ಕಳೆದ ಋತುವಿನಲ್ಲಿ ರಿಯಲ್ ಮ್ಯಾಡ್ರಿಡ್ಗಾಗಿ 46 ಪಂದ್ಯಗಳಲ್ಲಿ 44 ಗೋಲುಗಳನ್ನು ಗಳಿಸಿದ್ದರು. ಇದರಲ್ಲಿ ಲಾ ಲಿಗಾದಲ್ಲಿ 27 ಗೋಲುಗಳು ಸೇರಿದ್ದವು. ಬೆಜೆನ್ಮಾ ಚಾಂಪಿಯನ್ಸ್ ಲೀಗ್ನಲ್ಲಿ 12 ಪಂದ್ಯಗಳಲ್ಲಿ 15 ಗೋಲುಗಳನ್ನು ಗಳಿಸಿದ್ದಾರೆ.
Karim Benzema, Messi, Ronaldo, Football,