ಟಿ20 ಕ್ರಿಕೆಟ್ನಲ್ಲಿ ಪವರ್ ಹಿಟ್ಟಿಂಗ್ ಇಲ್ಲದೇ ಇದ್ದರೆ ಅದಕ್ಕೆ ಮಜಾನೇ ಇರುವುದಿಲ್ಲ. ಐಪಿಎಲ್ನಲ್ಲಿ ಸಿಕ್ಸರ್ಗಳ ಲೆಕ್ಕ ಜೋರಾಗಿ ನಡೆಯುತ್ತಿದೆ. ಈ ಬಾರಿಯ ಐಪಿಎಲ್ ನಲ್ಲೂ ಸಿಕ್ಸರ್ ಗಳ ಸುರಿಮಳೆಯಾಗಿದೆ. ಅಚ್ಚರಿ ಅಂದರೆ ಈ ಪವರ್ ಹಿಟ್ಟಿಂಗ್ನಲ್ಲಿ ವಿದೇಶಿ ಆಟಗಾರರು ಮುನ್ನಡೆಯಲ್ಲಿದ್ದಾರೆ. ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 5 ಆಟಗಾರರ ಪೈಕಿ ನಾಲ್ವರು ವಿದೇಶಿ ಆಟಗಾರರೇ ಆಗಿದ್ದಾರೆ.
ರಾಜಸ್ಥಾನ ರಾಯಲ್ಸ್ನ ಜೋಸ್ ಬಟ್ಲರ್ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಹಾಗೂ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಬರೆದಿದ್ದಾರೆ. ಬಟ್ಲರ್ 23 ಸಿಕ್ಸರ್ ಸಿಡಿಸಿದ್ದಾರೆ. ರಾಯಲ್ಸ್ ತಂಡದ ಮತ್ತೊಬ್ಬ ಆಟಗಾರ ಶಿಮ್ರನ್ ಹೆಟ್ಮಯರ್ 17 ಸಿಕ್ಸರ್ ಸಿಡಿಸಿ 2ನೇ ಸ್ಥಾನದಲ್ಲಿದ್ದಾರೆ. ಲಿಯಂ ಲಿವಿಂಗ್ ಸ್ಟೋನ್ ಮತ್ತು ಆ್ಯಂಡ್ರೆ ರಸೆಲ್ ತಲಾ 16 ಸಿಕ್ಸರ್ ಸಿಡಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿನೇಶ್ ಕಾರ್ತಿಕ್ 14 ಸಿಕ್ಸರ್ ಸಿಡಿಸಿ 5ನೇ ಸ್ಥಾನದಲ್ಲಿದ್ದಾರೆ.