ಸುಲ್ತಾನ್ ಜೋಹರ್ ಜೂನಿಯರ್ ಹಾಕಿ ಕಪ್ ಟೂರ್ನಿಯಲ್ಲಿ ಭಾರತ ಕಿರಿಯರ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧ ರೋಚಕವಾಗಿ ಡ್ರಾ ಸಾಧಿಸಿದೆ.
ರೋಚಕ ಕದನಲ್ಲಿ ಭಾರತ ಕಿರಿಯರ ಆಸ್ಟ್ರೇಲಿಯಾ ವಿರುದ್ಧ ಕೊನೆ ನಿಮಿಷಗಳಲ್ಲಿ ಗೋಲು ಹೊಡೆದು 5-5 ಅಂತರದಿಂದ ಡ್ರಾಸಾಧಿಸುವಲ್ಲಿ ಯಶಸ್ವಿಯಾಯಿತು.
ಮೊದಲಾರ್ಧದಲ್ಲಿ 3-3 ಗೋಲುಗಳಿಂದ ಸಮಗೊಂಡಿತು.
ಅಮನದೀಪ್ ಗೋಲನ್ನು ಕೊನೆ ಕ್ಷಣದಲ್ಲಿ ತಡೆದರು. ಭಾರತ ಪರ ಬಾಬಿ ಸಿಂಗ್ ( 2ನೇ ನಿಮಿಷ), ಶರದಾ ನಂದ್ ತಿವಾರಿ (8, 35ನೇ ನಿಮಿಷ), ಅರ್ಜೀತ್ ಸಿಂಗ್ (18ನೇ ನಿಮಿಷ), ಗೋಲುಗಳನ್ನು ಹೊಡೆದರು.
ಆಸ್ಟ್ರೇಲಿಯಾ ಪರ ಲಿಯಾಮ್ ಹಾರ್ಟ್ (3ನೇ ನಿಮಿಷ), ಜಾಕ್ ಹೋಲೆಂಡ್ (8ನೇನಿಮಿಷ), ಜೋಶುಹಾ ಬ್ರೂಕ್ಸ್ (20,40ನೇ ನಮಿಷ), ಮತ್ತು ಜಾಕ್ ಲಾಮೆಬೆತ್ (49ನೇ ನಿಮಿಷ) ಗೋಲುಗಳನ್ನು ಹೊಡೆದರು.
ಭಾರತ ಕಿರಿಯರ ತಂಡ ಶುಕ್ರವಾರ ಗ್ರೇಟ್ ಬ್ರಿಟನ್ ವಿರುದ್ಧ ಆಡಲಿದೆ.
ನಾಲ್ಕು ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತ ಕಿರಿಯರ ತಂಡ ಎರಡು ಗೆಲುವು, ಒಂದು ಡ್ರಾ ಹಾಗೂ 1 ಪಂದ್ಯದಲ್ಲಿ ಸೋತಿದೆ.