ಅತಿಥೇಯ ನ್ಯೂಜಿ಼ಲೆಂಡ್ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡದ ಅನುಭವಿ ಆಟಗಾರ ಜೋ ರೂಟ್, ಭರ್ಜರಿ ಶತಕ ಬಾರಿಸುವ ಮೂಲಕ ಡೇವಿಡ್ ವಾರ್ನರ್ ದಾಖಲೆ ಸರಿಗಟ್ಟಿದ್ದಾರೆ.
ನ್ಯೂಜಿ಼ಲೆಂಡ್ ವಿರುದ್ಧದ 2ನೇ ಟೆಸ್ಟ್ನ ಮೊದಲ ದಿನದಾಟದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಜೋ ರೂಟ್(101*) ರನ್ಗಳಿಸುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ನ 29ನೇ ಶತಕ ದಾಖಲಿಸಿದರು. ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿರುವ ರೂಟ್, ಏಕದಿನ ಕ್ರಿಕೆಟ್ನಲ್ಲಿ 16 ಶತಕ ದಾಖಲಿಸಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 45 ಶತಕ ದಾಖಲಿಸಿದ್ದಾರೆ.
ಒಟ್ಟಾರೆ 45ನೇ ಅಂತಾರಾಷ್ಟ್ರೀಯ ಶತಕದೊಂದಿಗೆ ರೂಟ್, ಆಸ್ಟ್ರೇಲಿಯ ತಂಡದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ದಾಖಲೆ ಸರಿಗಟ್ಟಿದರು. ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ನ ಆಕ್ಟೀವ್ ಪ್ಲೇಯರ್ಗಳ ಸಾಲಿನಲ್ಲಿ ಟೀಂ ಇಂಡಿಯಾದ ವಿರಾಟ್ ಕೊಹ್ಲಿ, ಎಲ್ಲಾ ಮಾದರಿ ಕ್ರಿಕೆಟ್ನಲ್ಲಿ ಅಧಿಕ ಶತಕ ದಾಖಲಿಸಿದ ಹೆಗ್ಗಳಿಕೆ ಹೊಂದಿದ್ದು, 74 ಶತಕಗಳನ್ನ ದಾಖಲಿಸಿದ್ದಾರೆ.
ಜೋ ರೂಟ್ ಹೊರತಾಗಿ ಆಸ್ಟ್ರೇಲಿಯಾದ ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್(30) ಟೆಸ್ಟ್ ಶತಕ ದಾಖಲಿಸಿದ್ದಾರೆ. ಜೋ ರೂಟ್ ತಮ್ಮ 129ನೇ ಟೆಸ್ಟ್ ಪಂದ್ಯವಾಡಿದ್ದು, 50ರ ಬ್ಯಾಟಿಂಗ್ ಸರಾಸರಿಯಲ್ಲಿ 10,800 ರನ್ಗಳಿಸಿದ್ದಾರೆ.
Joe Root, England, Test Cricket, David Warner, Sports Karnataka, New Zealand