ಜಸ್ಪ್ರೀತ್ ಬುಮ್ರಾ ಪ್ರಸ್ತುತ ಟೀಮ್ ಇಂಡಿಯಾದ ಅತಿದೊಡ್ಡ ಮ್ಯಾಚ್ ವಿನ್ನಿಂಗ್ ಬೌಲರ್. ಈ ಬಾರಿಯ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಅವರ ಪ್ರದರ್ಶನ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಅವರು 10 ಪಂದ್ಯಗಳಲ್ಲಿ ಕೇವಲ 5 ವಿಕೆಟ್‌ಗಳನ್ನು ಮಾತ್ರ ಕಬಳಿಸಿದ್ದರು. ಇದರ ಪರಿಣಾಮ 5 ಬಾರಿ ಐಪಿಎಲ್ ಪ್ರಶಸ್ತಿ ವಿಜೇತ ಮುಂಬೈ ಟೂರ್ನಿಯಿಂದ ಹೊರಬಿದ್ದಿದೆ. ಆರಂಭದಲ್ಲಿ ಎದ್ದಿದ್ದ ಟೀಕೆಗಳಿಗೆ ಇವರು ತಮ್ಮ ಪ್ರದರ್ಶನದ ಮೂಲಕ ಉತ್ತರ ನೀಡಿದ್ದಾರೆ.
ಐಪಿಎಲ್ 15ರ 56ನೇ ಪಂದ್ಯದಲ್ಲಿ ಬುಮ್ರಾ ಕೋಲ್ಕತ್ತಾ ವಿರುದ್ಧ ಕೇವಲ 10 ರನ್ ನೀಡಿ 5 ವಿಕೆಟ್ ಪಡೆದರು. ಇದು ಅವರ ಟಿ-20 ವೃತ್ತಿ ಜೀವನದ ಅತ್ಯುತ್ತಮ ಪ್ರದರ್ಶನ. ಬುಮ್ರಾ ಪ್ರತಿ ಬಾರಿಯೂ ಜೀವನದ ಎಲ್ಲಾ ಕಷ್ಟಗಳನ್ನು ಸೋಲಿಸಿ ಬಲವಾಗಿ ಎದ್ದು ನಿಂತಿದ್ದಾರೆ.

ಜಸ್ಪ್ರೀತ್ 5 ವರ್ಷದವರಿದ್ದಾಗ, ಅವರ ತಂದೆ ನಿಧನರಾದರು. ತಂದೆಯನ್ನು ಕಳೆದುಕೊಂಡಾಗ ಕುಟುಂಬ ಸಂಕಷ್ಟಕ್ಕೆ ಸಿಲುಕಿತು. ಅವರ ಬಳಿ ಒಂದು ಜೊತೆ ಶೂ ಮತ್ತು ಒಂದು ಜೊತೆ ಟಿ-ಶರ್ಟ್ ಇತ್ತು. ದಿನವೂ ಅವುಗಳನ್ನೆ ತೊಳೆದು ಮತ್ತೆ ಮತ್ತೆ ಉಪಯೋಗಿಸುತ್ತಿದ್ದರು. ದಿನಚರಿ ಕಠಿಣವಾಗಿತ್ತು ಆದರೆ ಬುಮ್ರಾ ಪ್ರಯತ್ನ ಬಿಡಲಿಲ್ಲ. 14 ನೇ ವಯಸ್ಸಿನಲ್ಲಿ, ಬುಮ್ರಾ ಕ್ರಿಕೆಟ್‌ನಲ್ಲಿ ವೃತ್ತಿಜೀವನ ಆರಂಭಿಸಿದರು.

ಬುಮ್ರಾ ಯಾವಾಗಲೂ ವೇಗದ ಎಸೆತಗಳನ್ನು ಬೌಲಿಂಗ್ ಮಾಡಲು ಇಷ್ಟಪಡುತ್ತಿದ್ದರು. ಶಾಲಾ ಸಹಪಾಠಿಗಳಿಂದ ಹಿಡಿದು ನೆರೆಹೊರೆಯ ಮಕ್ಕಳವರೆಗೆ ಎಲ್ಲರ ಜೊತೆ ಆಡುವಾಗ ವೇಗವಾಗಿ ಬೌಲಿಂಗ್ ಮಾಡುತ್ತಿದ್ದರು. ನಿರಂತರ ಗದ್ದಲದ ಕಾರಣ, ಬುಮ್ರಾ ಅವರ ತಾಯಿ ತಮ್ಮ ಅಂಗಳದಲ್ಲಿ ಕ್ರಿಕೆಟ್ ಆಡುವುದನ್ನು ನಿಷೇಧಿಸಿದರು. ಹೀಗಾಗಿ ಬುಮ್ರಾ ಫ್ಲೋರ್ ಸ್ಕೆಟಿಂಗ್ ನಲ್ಲಿ ಬೌಲಿಂಗ್ ಮಾಡಲು ಆರಂಭಿಸಿದರು.
ಫ್ಲೋರ್ ಸ್ಕೆಟಿಂಗ್ ನಲ್ಲಿ ಬೌಲಿಂಗ್ ಮಾಡುವಾಗ ಬುಮ್ರಾ ಯಾರ್ಕರ್ ಬೌಲಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡರು. ತಾಯಿ ಈಗ ಮಗನ ಪ್ರತಿಭೆಯನ್ನು ಗುರುತಿಸಿದರು. ಅಲ್ಲದೆ ಅವರ ಮಗ ಇದೇ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುತ್ತಾರೆ ಎಂದು ಖಚಿತ ಪಡಿಸಿಕೊಂಡರು. ಅವರ ತಾಯಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಬುಮ್ರಾ ಅಭ್ಯಾಸದಲ್ಲಿ ಪಾಲ್ಗೊಳ್ಳಲು ಬೆಳಗ್ಗೆಯೇ ಮನೆಯಿಂದ ಹೊರಡುತ್ತಿದ್ದರು. ಆ ನಂತರ ಶಾಲೆಗೆ ಹೋಗಿ ಸಂಜೆ ತರಬೇತಿ ನಡೆಸುತ್ತಿದ್ದರು.

ಸ್ಟ್ರೀಟ್ ಕ್ರಿಕೆಟ್‌ನ ಬೌಲರ್‌ನನ್ನು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ನ ಶಿಬಿರಕ್ಕೆ ಆಯ್ಕೆ ಮಾಡಲಾಯಿತು. ಈಗ ಅವರು ಯಶಸ್ಸಿನ ಹೊಸ ಅಧ್ಯಾಯ ಬರೆಯಲು ಸಿದ್ಧರಾದರು. ಬುಮ್ರಾ MRF ಪೇಸ್ ಫೌಂಡೇಶನ್‌ಗೆ ಆಯ್ಕೆಯಾದರು. ಅಲ್ಲಿ ಅವರು ಬೌಲಿಂಗ್‌ನ ಸೂಕ್ಷ್ಮತೆಗಳನ್ನು ಕಲಿತರು.
ಅವರು ಬೌಲಿಂಗ್ ಮಾಡಲು ಬಯಸಿದ ರೀತಿಯಲ್ಲಿ ಬೌಲ್ ಮಾಡುವ ಸ್ವಾತಂತ್ರ್ಯವನ್ನು ನೀಡಲಾಯಿತು. ಇಲ್ಲಿಯವರೆಗೆ ಅವರು ಸೌರಾಷ್ಟ್ರ ವಿರುದ್ಧ ಗುಜರಾತ್ ಅಂಡರ್-19 ತಂಡಕ್ಕೆ ಆಡಲು ಆಯ್ಕೆಯಾಗಿದ್ದರು. ಈ ಪಂದ್ಯದಲ್ಲಿ ಬುಮ್ರಾ ಬ್ಯಾಟಿಂಗ್‌ಗೆ ಅನುಕೂಲಕರವಾದ ಪಿಚ್‌ನಲ್ಲಿ 7 ವಿಕೆಟ್ ಪಡೆದರು. ಮುಂಬೈ ಇಂಡಿಯನ್ಸ್ ತಂಡದ ಆಟಗಾರರ ಹುಡುಕಾಟ ಭರದಿಂದ ಸಾಗಿತ್ತು. 2003 ರ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಫೈನಲ್‌ಗೆ ಕೊಂಡೊಯ್ದ ಕೋಚ್ ಜಾನ್ ರೈಟ್, 7 ವಿಕೆಟ್‌ಗಳನ್ನು ಪಡೆದ ನಂತರ ಬುಮ್ರಾ ಅವರನ್ನು ಎಂಐಗೆ ಸೇರಿಸಿದರು. ಇಲ್ಲಿಂದ ಬುಮ್ರಾ ಜೀವನ ಸಂಪೂರ್ಣ ಬದಲಾಯಿತು.