ಭಾರತದ ಜೋಡಿ ಅಂಕಿತಾ ರೈನಾ ಮತ್ತು ಪ್ರಾರ್ಥನಾ ತೋಂಬ್ರೆ ಐಟಿಎಫ್ ಮಹಿಳಾ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ಸ್ ತಲುಪಿದೆ.
ಬೆಂಗಳೂರಿನಕೆಸ್‍ಎಲ್‍ಟಿಎ ಅಂಗಳದಲ್ಲಿ ನಡೆದ ಮಹಿಳಾ ಡಬಲ್ಸ್‍ನ 16ರ ಸುತ್ತಿನಲ್ಲಿ ಎರಡನೇ ಶ್ರೇಯಾಂಕ ಪಡೆದಿರುವ ಅಂಕಿತಾ ಜೋಡಿ ಶರ್ಮಾದಾ ಬಾಲು ಮತ್ತು ಸಾರಾ ರೆಬೆಕ್ಕಾ ಸೆಕುಲಿಕ್ ಜೋಡಿಯನ್ನು 5-7, 6-3, 10-6 ಅಂಕಗಳಿಂದ ಮಣಿಸಿತು.
ಇಂಡೋ ಸ್ವೀಡೀಶ್ ಜೋಡಿ ಋತುಜಾ ಬೋಸಾಲೆ ಮತ್ತು ಜಾಕ್ವೆಲಿನ್ ದುರಾಳಿ ಜೀ ಹೀ ಚೊಯ್ ಮತ್ತು ಲೀ ಯಾ ಹಸನ್ ಜೋಡಿಯನ್ನು 6-4, 6-2 ಅಂಕಗಳಿಂದ ಮಣಿಸಿತು.
ಮತ್ತೊಂದು ಭಾರತದ ಜೋಡಿ ಪ್ರಗತಿ ನಾರಾಯಣ ಮತ್ತು ಪ್ರತಿಭಾ ನಾರಾಯಣ್ ಎದುರಾಳಿ ಅನಾಸ್ತಾಸಿಯಾ ಮತ್ತು ಹಾನ್ನಾ ವಿರುದ್ಧ 4-6, 2-6 ಅಂಕಗಳಿಮದ ಸೋಲಿಸಿತು.
ಸಿಂಗಲ್ಸ್ ವಿಭಾಗದಲ್ಲಿ ಸಾಕುರಾ ಹೊಸೊಗಿ ಅವರನ್ನು ಜಪಾನ್‍ನ ಇಕುಮಿ ಯಮಾಜಾಕಿ 5-7, 3-6 ಅಂಕಗಳಿಂದ ಸೋಲಿಸಿದರು. ಶರ್ಮಾದಾ ಬ್ರಿಟನ್‍ನ ಎಡನ್ ಸಿಲ್ವಾ ವಿರುದ್ಧ 2-6,4-6 ಅಂಕಗಳಿಂದ ಸೋಲಿಸಿದರು.