ISSF World Championship ಐಎಸ್ಎಸ್ಎಫ್ ಜೂನಿಯರ್ ಶೂಟಿಂಗ್ ವಿಶ್ವಚಾಂಪಿಯನ್ ಶಿಪ್ನಲ್ಲಿ ಭಾರತ ನಾಲ್ಕು ಚಿನ್ನದ ಪದಕಗಳನ್ನು ಬಾಚಿದೆ.
ಮಂಗಳವಾರ ನಾಲ್ಕು ಚಿನ್ನ ಗೆಲ್ಲುವದರೊಂದಿಗೆ ಒಟ್ಟು 20 ಪದಕಗಳನ್ನು ಗೆದ್ದುಕೊಂಡಿದೆ. 9 ಚಿನ್ನ, 3 ಬೆಳ್ಳಿ ಹಾಗೂ 8 ಕಂಚಿನ ಪದಕ ಗೆದ್ದಿದೆ. ಚೀನಾ 18 ಚಿನ್ನದ ಪದಕಗಳೊಂದಿಗೆ ಒಟ್ಟು 37 ಪದಕಗಳೊಂದಿಗೆ ಒಂದು ಹೆಜ್ಜೆ ಮುಂದಿದೆ.
ಆರನೆ ದಿನ ಭಾರತದ ಜೂನಿಯರ್ ಮಹಿಳಾ ತಂಡ ಎಶಾ ಸಿಂಗ್, ಶಿಖಾ ನರ್ವಾಲ್ ಹಾಗೂ ವರ್ಷಾ ಸಿಂಗ್ ನೇತೃತ್ವದ ಏರ್ ಪಿಸ್ತೂಲ್ ತಂಡ ಚೀನಾವನ್ನು 16-6 ಅಂಕಗಳಿಂದ ಸೋಲಿಸಿ ಚಿನ್ನಕ್ಕೆ ಮುತ್ತಿಕ್ಕಿತ್ತು.
ಮತ್ತೊಂದು ಜೂನಿಯರ್ ರೈಫಲ್ ವಿಭಾಗದಲ್ಲಿ ರಮೀತಾ, ನಾನ್ಸಿ ಹಾಗೂ ತಿಲೊತ್ತಮ ಸೇನ್ ಚಿನ್ನ ಪಡೆಯಿತು. ಚೀನಾವನ್ನು 16-2 ಅಂಕಗಳಿಂದ ಮಣಿಸಿತು. ಮೊದಲ ಸುತ್ತಿನಲ್ಲಿ 941.5 ಅಂಕ ಪಡೆದಿತ್ತು. 627.6 ಅಂಕವವನ್ನು ಎರಡನೆ ಸುತ್ತಿನಲ್ಲಿ ಪಡೆದಿತ್ತು .
ಪುರುಷರ ಏರ್ ರೈಫಲ್ ತಂಡದ ವಿಭಾಗದಲ್ಲಿ ಶೂಟರ್ ಗಳಾದ ಪ್ರತಾಪ್ ಸಿಂಗ್ ತೋಮರ್, ಕಾರ್ತಿಕ್ ಸಬರಾಯಿ,ವಿದಿತ್ ಜೈನ್ ಚೀನಾ ವಿರುದ್ಧ 17-11 ಅಂಕಗಳಿಂದ ಗೆದ್ದರು.