9ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ನಲ್ಲಿ ಬೆಂಗಳೂರು ಎಫ್ಸಿ ತಂಡ ಫೈನಲ್ ಪ್ರವೇಶಿಸಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮಂಬೈ ಸಿಟಿ ಎಫ್ಸಿ ವಿರುದ್ಧದ ಸೆಮಿಫೈನಲ್ ಚರಣದ ಪಂದ್ಯದ ಶೂಟೌಟ್ನಲ್ಲ 9-8 ರೋಚಕ ಗೆಲುವು ದಾಖಲಿಸಿತು.
ಇದರೊಂದಿಗೆ 2018-19ರ ಚಾಂಪಿಯನ್ ಬಿಎಫ್ಸಿ ಸತತ 11ನೇ ಗೆಲುವಿನೊಂದಿಗೆ ಐಎಸ್ಎಲ್ನಲ್ಲಿ 3ನೇ ಬಾರಿ ಫೈನಲ್ ಪ್ರವೇಶಿಸಿದೆ.
ಎರಡನೆ ಬಾರಿ ಪ್ರಶಸ್ತಿಗೇರುವ 2020-21ರ ಚಾಂಪಿಯನ್ ಮುಂಬೈ ಕನಸು ಭಗ್ನಗೊಂಡಿದೆ.
ಮೊನ್ನೆ ಮುಂಬೈನಲ್ಲಿ ನಡೆದಿದ್ದ ಸೆಮಿಫೈನಲ್ನ ಮೊದಲ ಚರಣದ ಪಂದ್ಯದಲ್ಲಿ ಬಿಎಫ್ಸಿ 1-0 ಗೆಲುವು ಸಾಧಿಸಿತು.ಹೀಗಾಗಿ ಮುನ್ನಡೆಯೊಂದಿಗೆ ಕಾಲಿಟ್ಟ ಬಿಎಫ್ಸಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು.
ಜಿದ್ದಾಜಿದ್ದಿನ ಕದನದಲ್ಲಿ ಮುಂಬೈ ನಿಗದಿತ ಅವಧಿ ಮುಕ್ತಾಯದ ವೇಳೆಗೆ 2-1 ಗೋಲುಗಳಿಂದ ಮುಂದಿತ್ತು.
ಆದರೆ ಮುಂಬೈ ಈ ಲೆಕ್ಕಚಾರವನ್ನು ಉಲ್ಟಾ ಮಾಡಿತು.
ಎರಡು ಪಂದ್ಯಗಳ ಗೋಲು ಗಳಿಕೆಯಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದವು. ಬಳಿಕ ಹೆಚ್ಚುವರಿ 30 ನಿಮಿಗಳ ಕಾಲ ಆಡಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೂ ಶೂಟೌಟ್ ಮೊರೆ ಹೋಗಾಲಾಯಿತು. ಶೂಟೌಟ್ನಲ್ಲಿ ಬೆಂಗಳೂರು ತಂಡ ರೋಚಕವಾಗಿ ಗೆದ್ದುಕೊಂಡಿತು.