ISL: ಬೆಂಗಳೂರು ಬುಲ್ಸ್ ನಿರಾಸೆ
ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ ನಿರಾಸೆ ಅನುಭವಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಬಿಎಫ್ ಸಿ 0-1 ರಿಂದ ಹೈದರಾಬಾದ್ ಫುಟ್ಬಾಲ್ ತಂಡದ ವಿರುದ್ಧ ನಿರಾಸೆಕಂಡಿತು.
ಮೊದಲಾವಧಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಉಭಯ ತಂಡಗಳು ಆಕರ್ಷಿಸಿದವು. ಈ ಪಂದ್ಯದಲ್ಲಿ ಬಿಎಫ್ ಸಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೋಲು ದಾಖಲಿಸುವಲ್ಲಿ ವಿಫಲವಾದವು. ಈ ಅವಧಿಯಲ್ಲಿ ಹೈದರಾಬಾದ್ ತಂಡ ಸಹ ಗೋಲು ಸಿಡಿಸುವಲ್ಲಿ ಹಿಂದೆ ಬಿದ್ದವು. ಪರಿಣಾಮ ಮೊದಲಾವಧಿಯ ಆಟದಲ್ಲಿ ಗೋಲು ರಹಿತವಾಗಿದ್ದರಿಂದ ಎರಡನೇ ಅವಧಿಯ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು.
83ನೇ ನಿಮಿಷದಲ್ಲಿ ಹೈದರಾಬಾದ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೋಲು ದಾಖಲಿಸಿತು. ಪರಿಣಾಮ ಹೈದರಾಬಾದ್ 1-0 ಮುನ್ನಡೆ ಸಾಧಿಸಿತು. ಕೊನೆಯ ಕ್ಷಣದ ವರೆಗೂ ಗೋಲು ಬಾರಿಸುವ ಬೆಂಗಳೂರು ತಂಡದ ಆಸೆ ಫಲಿಸಲಿಲ್ಲ. ಪರಿಣಾಮ ಬೆಂಗಳೂರು ಸೋಲು ಕಂಡಿತು. ಬೆಂಗಳೂರು ಆಡಿದ ಮೂರು ಪಂದ್ಯಗಳಲ್ಲಿ 1 ಗೋಲು, 1 ಡ್ರಾ, 1 ಸೋಲು ಕಂಡಿದ್ದು, ನಾಲ್ಕು ಅಂಕಗಳೊಂದಿಗೆ ನಾಲ್ಕು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ISL, Bangalore Football Club, Hyderabad