ಬೌಂಡರಿ ಲೈನ್ನಲ್ಲಿ ಹಾಕಲಾಗಿರುವ ಜಾಹೀರಾತು ಹಗ್ಗದ ಮೇಲೆ ಮುಂಬೈ ಇಂಡಿಯನ್ಸ್ ಓಪನರ್ ಇಶಾನ್ ಕಿಶನ್ ಸಿಟ್ಟನ್ನು ತೋರಿಸಿದ್ದು, ಇವರ ವರ್ತನೆ ಕ್ಯಾಮೇರಾ ಕಣ್ಣಲ್ಲಿ ಸೆರೆಯಾಗಿದೆ. ಇವರಿಗೆ ದಂಡವನ್ನೂ ವಿಧಿಸಬಹುದು.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಶನಿವಾರ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಜೈಂಟ್ಸ್ ನಡುವೆ ನಡೆದ ಪಂದ್ಯದಲ್ಲಿ ಮುಂಬೈ ಗೆಲುವಿಗೆ 200 ರನ್ಗಳ ಅಗತ್ಯವಿತ್ತು. ಮುಂಬೈ ಗೆಲುವಿಗೆ ಆರಂಭಿಕ ಇಶಾನ್ ಕಿಶನ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಉತ್ತಮ ಆರಂಭ ನೀಡಬೇಕಿತ್ತು. ರೋಹಿತ್ ಶರ್ಮಾ ಬೇಗನೆ ಔಟಾದರು.
ಇಂತಹ ಪರಿಸ್ಥಿತಿಯಲ್ಲಿ ಎರಡನೇ ಓಪನರ್ ಇಶಾನ್ ಕಿಶನ್ ಅವರಿಂದ ತಂಡ ಉತ್ತಮ ಇನ್ನಿಂಗ್ಸ್ ನಿರೀಕ್ಷಿಸಿತ್ತು. ಆದರೆ ಅವರೂ ಮಾರ್ಕಸ್ ಸ್ಟೋನಿಸ್ ಎಸೆದ 7ನೇ ಓವರ್ ನಲ್ಲಿ ಔಟಾದರು. ಅವರು 17 ಎಸೆತಗಳಲ್ಲಿ 13 ರನ್ ಗಳಿಸಲಷ್ಟೇ ಶಕ್ತರಾದರು. ಫ್ಲಾಪ್ ಆದ ಬಗ್ಗೆ ಕೋಪಗೊಂಡ ಇಶಾನ್ ಡಗೌಟ್ಗೆ ಮರಳುವ ವೇಳೆ ಬೌಂಡರಿಯಲ್ಲಿ ಹಾಕಿದ್ದ ಹಗ್ಗಕ್ಕೆ ಕೋಪದಿಂದ ಬ್ಯಾಟ್ನಿಂದ ಹೊಡೆದರು. ಇಶಾನ್ ನ ಈ ಕೃತ್ಯಕ್ಕೆ ಆತನಿಗೆ ದಂಡ ಕೂಡ ವಿಧಿಸಬಹುದಾಗಿದೆ.
ಮೆಗಾ ಹರಾಜಿನಲ್ಲಿ ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 15.25 ಕೋಟಿ ರೂಪಾಯಿಗೆ ಖರೀದಿಸಿತ್ತು. ಐಪಿಎಲ್ನ ಈ ಋತುವಿನಲ್ಲಿ ಅವರು ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ ಅದರ ನಂತರ ಅವರು ತಮ್ಮ ಲಯದಿಂದ ವಂಚಿತರಾದರು. ಮತ್ತು ಅವರ ಬ್ಯಾಟ್ನಿಂದ ಹೆಚ್ಚು ರನ್ ಬರಲು ಸಾಧ್ಯವಾಗಲಿಲ್ಲ. ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು 81 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ರಾಜಸ್ಥಾನ್ ರಾಯಲ್ಸ್ ವಿರುದ್ಧವೂ 54 ರನ್ ಗಳಿಸಿದ್ದರು. ಆದರೆ ಆ ಬಳಿಕ ಅವರ ಬ್ಯಾಟ್ ಮೌನವಾಗಿದೆ. ಯಾವುದೇ ಪಂದ್ಯದಲ್ಲೂ 26ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಿಲ್ಲ. ಅವರು ಇಲ್ಲಿಯವರೆಗೆ ಆಡಿದ 6 ಇನ್ನಿಂಗ್ಸ್ಗಳಲ್ಲಿ 38.20 ಸರಾಸರಿಯಲ್ಲಿ 191 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 117.17.
ಐಪಿಎಲ್ 15ನೇ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ ಗೆ ಇದು ಆರನೇ ಸೋಲು. ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು.