ಶೇಷ ಭಾರತ ತಂಡ ಸೌರಾಷ್ಟ್ರ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿ ಇರಾನಿ ಟ್ರೋಫಿ ಚಾಂಪಿಯನ್ನಾಗಿ ಹೊರಹೊಮ್ಮಿದೆ. ಇದರೊಂದಿಗೆ 29ನೇ ಬಾರಿಗೆ ಶೇಷ ಭಾರತ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಮಂಗಳವಾರ ಇಲ್ಲಿನ ರಾಜ್ ಕೋಟ್ ಮೈದಾನದಲ್ಲಿ ನಡೆದ ಮೂರನೆ ದಿನದಾಟದ ಪಂದ್ಯದಲ್ಲಿ ಸೌರಾಷ್ಟ್ರ ತಂಡ ಎರಡನೆ ಇನ್ನಿಂಗ್ಸ್ ನಲ್ಲಿ 380 ರನ್ ಗಳಿಗೆ ಆಲೌಟ್ ಆಯಿತು. ನಾಯಕ ಜಯದೇವ್ ಉನದ್ಕಾಟ್ 89, ಪಾರ್ತ್ ಭಟ್ 7 ರನ್ ಗಳಿಸಿದರು.
ಇದರೊಂದಿಗೆ ಶೇಷ ಭಾರತ ತಂಡಕ್ಕೆ 105 ರನ್ ಗುರಿ ನೀಡಿತು.
ಸುಲಭ ಗುರಿ ಬೆನ್ನತ್ತಿದ ಶೇಷ ಭಾರತ ತಂಡ ಓಪನರ್ ಪ್ರಿಯಾಂಕ್ ಪಾಂಚಲ್ (2 ರನ್) ಮತ್ತು ಯಶ್ ಧುಲ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು. ಮತ್ತೋರ್ವ ಓಪನರ್ ಅಭಿಮನ್ಯೂ ಈಶ್ವರನ್ 78 ಎಸೆತದಲ್ಲಿ 9 ಬೌಂಡರಿ ಸಿಡಿಸಿ ಅಜೇಯ 63 ರನ್ ಗಳಿಸಿದರು.
ಶ್ರೀಕರ್ ಭರತ್ ಅಜೇಯ 27 ರನ್ ಗಳಿಸಿದರು. ಶೇಷ ಭಾರತ 2 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿತು. ಎರಡು ಇನ್ನಿಂಗ್ಸ್ ಗಳಿಂದ 5 ವಿಕೆಟ್ ಪಡೆದ ಮುಖೇಶ್ ಕುಮಾರ್ ಪಮದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.