RCB – ರಾಹುಲ್ ದ್ರಾವಿಡ್‌ಗೆ ಆರ್‌ಸಿಬಿಯಲ್ಲಿ ಆಗಿದ್ದ ಅವಮಾನ ಗೊತ್ತಾ..?

ಕ್ರಿಕೆಟ್ ಅನ್ನು Gentlemanಗಳ ಗೇಮ್ ಅಂತ ಕರೆಯುತ್ತಾರೆ. ಆ Gentleman ಗೇಮ್’ನ ನಿಜವಾದ ಜಂಟಲ್’ಮ್ಯಾನ್ “ದಿ ಗ್ರೇಟ್ ವಾಲ್ ಆಫ್ ಇಂಡಿಯಾ” ಖ್ಯಾತಿಯ ರಾಹುಲ್ ದ್ರಾವಿಡ್.
ರಾಹುಲ್ ದ್ರಾವಿಡ್ ಕರ್ನಾಟಕದ ಹೆಮ್ಮೆ. ಟೀಮ್ ಇಂಡಿಯಾದ ಹಾಲಿ ಕೋಚ್ ಆಗಿರುವ ದ್ರಾವಿಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊಟ್ಟ ಮೊದಲ ಕ್ಯಾಪ್ಟನ್. 2008ರಲ್ಲಿ ಐಪಿಎಲ್ ಟೂರ್ನಿ ಆರಂಭಗೊಂಡಾಗ ತಂಡದ ನಾಯಕರಾಗಿದ್ದವರು ದ್ರಾವಿಡ್.
2008ರ ಐಪಿಎಲ್ ಟೂರ್ನಿಯಲ್ಲಿ ದ್ರಾವಿಡ್ ನಾಯಕತ್ವದಲ್ಲಿ ಆಡಿದ್ದ ರಾಯಲ್ ಚಾಲೆಂಜರ್ಸ್ ತಂಡ 7ನೇ ಸ್ಥಾನ ಪಡೆದಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ 4ರಲ್ಲಿ ಮಾತ್ರ ಗೆದ್ದಿದ್ದ ಆರ್’ಸಿಬಿ, 10 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಗಿಲ್’ಕ್ರಿಸ್ಟ್ ನಾಯಕತ್ವದ ಡೆಕ್ಕನ್ ಚಾರ್ಜರ್ಸ್ ಹೈದ್ರಾಬಾದ್ ತಂಡ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಆದರೆ ಇದೇ ಗಿಲ್’ಕ್ರಿಸ್ಟ್ ಸಾರಥ್ಯದ ಡೆಕ್ಕನ್ ಚಾರ್ಜರ್ಸ್ 2009ರ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆದ್ರೆ, ರಾಹುಲ್ ದ್ರಾವಿಡ್ ಮಾತ್ರ ರಾಯಲ್ ಚಾಲೆಂಜರ್ಸ್ ತಂಡದ ನಾಯಕತ್ವವನ್ನೇ ಕಳೆದುಕೊಂಡಿದ್ರು.

2008ರಲ್ಲಿ ಕಂಡ ವೈಫಲ್ಯದ ಬಳಿಕ ಆರ್’ಸಿಬಿ ಫ್ರಾಂಚೈಸಿ ಮಾಲೀಕ ವಿಜಯ್ ಮಲ್ಯ, ರಾಹುಲ್ ದ್ರಾವಿಡ್ ಅವರನ್ನು ನಾಯಕತ್ವದಿಂದ ಮುಲಾಜಿಲ್ಲದೆ ಕೆಳಗಿಳಿಸಿ ಇಂಗ್ಲೆಂಡ್”ನ ಕೆವಿನ್ ಪೀಟರ್ಸನ್ ಅವರಿಗೆ ನಾಯಕನ ಪಟ್ಟ ಕಟ್ಟಿದ್ರು. ಒಂದೇ ವರ್ಷದಲ್ಲಿ ನಾಯಕತ್ವ ಕಳೆದುಕೊಂಡು ದ್ರಾವಿಡ್, ನಂತರ ಪೀಟರ್ಸನ್ ನಾಯಕತ್ವದಲ್ಲಿ ಆಡಿದ್ರು. ಪೀಟರ್ಸನ್ ಟೂರ್ನಿಯ ಮಧ್ಯದಲ್ಲೇ ತಂಡವನ್ನ ತೊರೆದಾಗ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಆರ್’ಸಿಬಿ ನಾಯಕರಾದ್ರು. ಕುಂಬ್ಳೆ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ 2009ರಲ್ಲಿ ಐಪಿಎಲ್ ಫೈನಲ್ ತಲುಪಿತ್ತು. ಆದ್ರೆ ಫೈನಲ್”ನಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದ್ರಾಬಾದ್ ವಿರುದ್ಧ ಸೋತು ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. IPL – RCB – Rahul dravid and Royal Challengers Bengaluru
2010ರ ಟೂರ್ನಿಯಲ್ಲೂ ರಾಹುಲ್ ದ್ರಾವಿಡ್ ಒಬ್ಬ ಸಾಮಾನ್ಯ ಆಟಗಾರನಾಗಿ ರಾಯಲ್ ಚಾಲೆಂಜರ್ಸ್ ಪರ ಆಡಿದ್ರು. ಆದ್ರೆ ಆರ್’ಸಿಬಿ ಫ್ರಾಂಚೈಸಿ ಸರಿಯಾಗಿ ನಡೆಸಿಕೊಳ್ಳದ ಕಾರಣ ತಂಡ ತೊರೆದ ದ್ರಾವಿಡ್, 2011ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಂಡು ಆ ತಂಡದ ನಾಯಕನೂ ಆದ್ರು. ಮುಂದಿನ ಮೂರು ವರ್ಷಗಳ ಕಾಲ ರಾಜಸ್ಥಾನ್ ರಾಯಲ್ಸ್ ಪರ ಆಡಿದ ದ್ರಾವಿಡ್, 2013ರಲ್ಲಿ ಐಪಿಎಲ್’ಗೆ ನಿವೃತ್ತಿ ಘೋಷಿಸಿದ್ರು.