ನ್ಯೂಜಿ಼ಲೆಂಡ್ ತಂಡದ ಯುವ ಆಲ್ರೌಂಡರ್ ಮೈಕಲ್ ಬ್ರೇಸ್‌ವೆಲ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಪರ ಆಡಲಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿರುವ ಇಂಗ್ಲೆಂಡ್ ತಂಡದ ವಿಲ್ ಜ್ಯಾಕ್ಸ್ ಪ್ರಸಕ್ತ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಸ್ಥಾನದಲ್ಲಿ 32 ವರ್ಷದ ಮೈಕಲ್ ಬ್ರೇಸ್‌ವೆಲ್ ಕಣಕ್ಕಿಳಿಯಲಿದ್ದಾರೆ. ಆಲ್ರೌಂಡರ್ ಬ್ರೇಸ್‌ವೆಲ್ ತಮ್ಮ ಮೂಲಕ ಬೆಲೆ 1 ಕೋಟಿ ರೂ. ಮೊತ್ತಕ್ಕೆ ಆರ್‌ಸಿಬಿ ಸೇರಿಕೊಂಡಿದ್ದಾರೆ.
ಕಿವೀಸ್ ತಂಡದ ಯುವ ಆಲ್ರೌಂಡರ್ ಆಗಿರುವ ಬ್ರೇಸ್‌ವೆಲ್, ಭಾರತದ ನೆಲದಲ್ಲಿ ಆಡಿದ ಅನುಭವ ಹೊಂದಿದ್ದು, ಈ ವರ್ಷದ ಆರಂಭದಲ್ಲಿ ಭಾರತದ ವಿರುದ್ಧದ ODI ಮತ್ತು T20I ಸರಣಿಯಲ್ಲಿ ಪಾಲ್ಗೊಂಡಿದ್ದರು. ಈವರೆಗೂ 117 ಟಿ20 ಪಂದ್ಯಗಳನ್ನ ಆಡಿರುವ ಬ್ರೇಸ್‌ವೆಲ್, 30.86ರ ಬ್ಯಾಟಿಂಗ್ ಸರಾಸರಿ ಹಾಗೂ 133.48ರ ಸ್ಟ್ರೈಕ್ ರೇಟ್‌ನಲ್ಲಿ 2284 ರನ್‌ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 13 ಅರ್ಧಶತಕಗಳು ಒಳಗೊಂಡಿದೆ.
ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲೂ ಮಿಂಚಿರುವ ಬ್ರೇಸ್‌ವೆಲ್, ಟಿ20 ಕ್ರಿಕೆಟ್‌ನಲ್ಲಿ 40 ವಿಕೆಟ್‌ಗಳನ್ನ ಪಡೆದಿದ್ದಾರೆ. ಇನ್ನೂ ಈವರೆಗೂ 16 T20I ಪಂದ್ಯಗಳನ್ನ ಆಡಿರುವ ಬ್ರೇಸ್‌ವೆಲ್, 113 ರನ್‌ಗಳು ಹಾಗೂ 21 ವಿಕೆಟ್ ಪಡೆದುಕೊಂಡಿದ್ದಾರೆ.
ಈ ಮೊದಲ ಐಪಿಎಲ್ ಹರಾಜಿನಲ್ಲಿ ಇಂಗ್ಲೆಂಡ್ ಬ್ಯಾಟರ್ ವಿಲ್ ಜ್ಯಾಕ್ಸ್ ಅವರನ್ನ ಆರ್‌ಸಿಬಿ ತಂಡ 3.2 ಕೋಟಿ ರೂ. ಮೊತ್ತಕ್ಕೆ ಖರೀದಿ ಮಾಡಿತ್ತು. ಆದರೆ ಗಾಯದ ಸಮಸ್ಯೆಯಿಂದ ವಿಲ್ ಜ್ಯಾಕ್ಸ್ ಟೂರ್ನಿಗೆ ಅಲಭ್ಯವಾದ ಹಿನ್ನೆಲೆಯಲ್ಲಿ 1 ಕೋಟಿ ಮೊತ್ತಕ್ಕೆ ಆಲ್ರೌಂಡರ್ ಮೈಕಲ್ ಬ್ರೇಸ್‌ವೆಲ್ ಅವರನ್ನ ಖರೀದಿಸಿದೆ.
IPL 2023, New Zealand, Michael Bracewell, Will Jacks, Sports Karnataka