ಮುಂಬರುವ ಐಪಿಎಲ್ನಲ್ಲಿ ಜೋಧ್ ಪುರದ ಬರ್ಕಾತ್ ಹುಲ್ಲಾ ಕ್ರೀಡಾಂಗಣ ಇದೆ ಮೊದಲ ಬಾರಿಗೆ ಐಪಿಎಲ್ ಪಂದ್ಯಗಳಿಗೆ ಆತಿಥ್ಯ ವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬ್ಲೂ ಸಿಟಿ ಎಂದೆ ಪ್ರಖ್ಯಾತಿ ಪಡೆದಿರುವ ಜೋಧಪುರ ಮಿಲಿಯನ್ ಡಾಲರ್ ಲೀಗ್ ಆತಿಥ್ಯ ವಹಿಸಲು ಸಜ್ಜಾಗುತ್ತಿದೆ. ಕೊರೋನಾ ನಂತರ ಇದೇ ಮೊದಲ ಬಾರಿಗೆ ಹೊಸ ಮೈದಾನವನ್ನು ಆಯ್ಕೆಮಾಡಿಕೊಳ್ಳಲಾಗಿದೆ.
ರಾಜಸ್ತಾನ ಕ್ರಿಕೆಟ್ ಅಸೋಸಿಯೇಷನ್ ಈ ಮೈದಾನದಲ್ಲಿ ಐಪಿಎಲ್ ಪಂದ್ಯಗಳನ್ನು ಆಡಿಸಲು ಬಿಸಿಸಿಐಗೆ ಮನವಿ ಮಾಡಿದೆ ಎಂದು ತಿಳಿದು ಬಂದಿದೆ.
ನಾವು ಮಾತಿನ ಮೂಲಕ ಮನವಿ ಮಾಡಿದ್ದೇವೆ. ರಾಜಸ್ತಾನ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣವನ್ನು ಪುನರ್ ನಿರ್ಮಿಸಿದೆ. ಬಿಸಿಸಿಐ ಈ ಬಗ್ಗೆ ಕೆಲವೇ ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಐಪಿಎಲ್ ಆತಿಥ್ಯ ವಹಿಸಲು ಕನಿಷ್ಟ ಮೂಲಭೂತ ಸೌಕರ್ಯವಿರಬೇಕು. ಕ್ರೀಡಾಂಗಣದ ಗಾತ್ರ ಅಗತ್ಯಕ್ಕೆ ತಕ್ಕಂತೆ ಇಲ್ಲ ಎಂದು ತಿಳಿದು ಬಂದಿದೆ.
ಬಿಸಿಸಿಐ ಒಂದು ತಂಡವನ್ನು ಕಳುಹಿಸಲಿದ್ದು ಐಪಿಎಲ್ ಆಡಳಿತ ಮಂಡಳಿಗೆ ವರದಿ ನೀಡಲಿದೆ ಎಂದು ತಿಳಿದು ಬಂದಿದೆ.