ಡಿಸೆಂಬರ್ 23 ರಂದು ಕೇರಳದ ಕೊಚ್ಚಿಯಲ್ಲಿ 2023ರ ಐಪಿಎಲ್ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಕಳೆದ ಬಾರಿ ಮೆಗಾ ಹರಾಜು ನಡೆದಿರುವ ಹಿನ್ನಲೆ, ಈ ಬಾರಿ ಆಯಾ ತಂಡವು ಬಿಡುಗಡೆ ಮಾಡುವ ಆಟಗಾರರ ಸ್ಥಾನಕ್ಕಾಗಿ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿಗೂ ಮುನ್ನ ಎಲ್ಲಾ ತಂಡಗಳು ಉಳಿಸಿಕೊಳ್ಳುವ ಹಾಗೂ ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸಬೇಕಾಗಿದೆ. ಹತ್ತು ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಮರುನಿರ್ಮಾಣ ಮಾಡಲಿವೆ. ಹತ್ತು ತಂಡಗಳು ಈಗಾಗಲೇ ಯಾವ್ಯಾವ ಆಟಗಾರರನ್ನು ತಂಡದಿಂದ ಕೈಬಿಡಬೇಕು ಎನ್ನುವ ಪಟ್ಟಿಯನ್ನು ಮಾಡಿಕೊಂಡಿವೆ.
1. ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸಿದ್ಧಾರ್ಥ್ ಕೌಲ್, ಕರ್ಣ್ ಶರ್ಮಾ ಡೇವಿಡ್ ವಿಲ್ಲಿ, ಆಕಾಶ್ ದೀಪ್ ಅವರನ್ನುತಂಡದಿಂದ ಕೈಬಿಡಲು ಚಿಂತನೆ ನಡೆಸಿದೆ.
2. ಚೆನ್ನೈ ಸೂಪರ್ ಕಿಂಗ್ಸ್: ಕ್ರಿಸ್ ಜೋರ್ಡಾನ್, ಆಡಮ್ ಮಿಲ್ನೆ, ನಾರಾಯಣ್ ಜಗದೀಸನ್, ಮಿಚೆಲ್ ಸ್ಯಾಂಟ್ನರ್.
3. ಮುಂಬೈ ಇಂಡಿಯನ್ಸ್: ಫ್ಯಾಬಿಯನ್ ಅಲೆನ್, ಕೀರಾನ್ ಪೊಲಾರ್ಡ್, ಟೈಮಲ್ ಮಿಲ್ಸ್, ಮಯಾಂಕ್ ಮಾರ್ಕಂಡೆ, ಹೃತಿಕ್ ಶೋಕೀನ್.
4. ಗುಜರಾತ್ ಟೈಟಾನ್ಸ್: ಮ್ಯಾಥ್ಯೂ ವೇಡ್, ವಿಜಯ್ ಶಂಕರ್, ಗುರುಕೀರತ್ ಮನ್ ಸಿಂಗ್, ಜಯಂತ್ ಯಾದವ್, ಪ್ರದೀಪ್ ಸಾಂಗ್ವಾನ್, ನೂರ್ ಅಹ್ಮದ್, ಸಾಯಿ ಕಿಶೋರ್ ವರುಣ್ ಆರೋನ್
5. ದೆಹಲಿ ಕ್ಯಾಪಿಟಲ್ಸ್: ಶಾರ್ದೂಲ್ ಠಾಕೂರ್, ಟಿಮ್ ಸಿಫೆರ್ಟ್, ಕಮಲೇಶ್ ನಾಗರಕೋಟಿ, ಕೆಎಸ್ ಭರತ್, ಮನ್ದೀಪ್ ಸಿಂಗ್, ರಿಪಾಲ್ ಪಟೇಲ್, ಚೇತನ್ ಸಕರಿಯಾ
6. ರಾಜಸ್ಥಾನ್ ರಾಯಲ್ಸ್: ನವದೀಪ್ ಸೈನಿ, ಡೇರಿಲ್ ಮಿಚೆಲ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಕಾರ್ಬಿನ್ ಬಾಷ್
7. ಪಂಜಾಬ್ ಕಿಂಗ್ಸ್: ಒಡಿಯನ್ ಸ್ಮಿತ್, ಮಯಾಂಕ್ ಅಗರ್ವಾಲ್, ಶಾರುಖ್ ಖಾನ್, ಇಶಾನ್ ಪೊರೆಲ್, ಬೆನ್ನಿ ಹೋವೆಲ್, ಬಲ್ತೇಜ್ ಸಿಂಗ್ ಧಂಡಾ, ರಿಟಿಕ್ ಚಟರ್ಜಿ, ರಿಷಿ ಧವನ್
8. ಲಕ್ನೋ ಸೂಪರ್ ಜೈಂಟ್ಸ್: ಕೈಲ್ ಮೇಯರ್ಸ್, ದುಷ್ಮಂತ ಚಮೀರಾ, ಮನೀಶ್ ಪಾಂಡೆ, ಶಹಬಾಜ್ ನದೀಮ್, ಅಂಕಿತ್ ರಾಜ್‌ಪೂತ್
9. ಸನ್ ರೈಸರ್ಸ್ ಹೈದರಾಬಾದ್: ರೊಮಾರಿಯೋ ಶೆಫರ್ಡ್, ಜಗದೀಶ ಸುಚಿತ್, ಕಾರ್ತಿಕ್ ತ್ಯಾಗಿ, ಸೀನ್ ಅಬಾಟ್, ಶಶಾಂಕ್ ಸಿಂಗ್, ಫಜಹಕ್ ಫಾರೂಕಿ, ಶ್ರೇಯಸ್ ಗೋಪಾಲ್
10. ಕೋಲ್ಕತ್ತಾ ನೈಟ್ ರೈಡರ್ಸ್: ಶಿವಂ ಮಾವಿ, ವೆಂಕಟೇಶ್ ಅಯ್ಯರ್, ಮೊಹಮ್ಮದ್ ನಬಿ, ಚಾಮಿಕಾ ಕರುಣಾರತ್ನೆ, ರಮೇಶ್ ಕುಮಾರ್, ಅಜಿಂಕ್ಯ ರಹಾನೆ, ಆರೋನ್ ಫಿಂಚ್