ಐಪಿಎಲ್ 15ನೇ ಆವೃತ್ತಿಯ ಟೂರ್ನಿಗೆ ದಿನಗಣನೆ ಅರಂಭವಾಗಿದೆ. ಮಹೂರ್ತ ಮತ್ತು ಅಖಾಡದ ಬಗ್ಗೆ ಕ್ಲಾರಿಟಿ ಸಿಕ್ಕಿದೆ. ಈ ಬಾರಿಯ ಐಪಿಎಲ್ ಕೊಂಚ ವಿಭಿನ್ನವಾಗಿ ನಡೆಯಲಿದೆ.
10 ತಂಡಗಳನ್ನು 2 ಗ್ರೂಪ್ಗಳಲ್ಲಿ ವಿಂಗಡಿಸಲಾಗಿದೆ. ಚಾಂಪಿಯನ್ ಪಟ್ಟ ಮತ್ತು ಫೈನಲ್ಗೆ ಎಂಟ್ರಿಕೊಟ್ಟ ಆಧಾರದಲ್ಲಿ ತಂಡಗಳನ್ನು ವಿಂಗಡಿಸಲಾಗಿದೆ. 10 ತಂಡಗಳು ಕೂಡಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡಲಿದೆ.
ಗ್ರೂಪ್ 1 ಗ್ರೂಪ್ 2:
1. ಮುಂಬೈ ಇಂಡಿಯನ್ಸ್ 2. ಚೆನ್ನೈ ಸೂಪರ್ಕಿಂಗ್ಸ್
3. ಕೊಲ್ಕತ್ತಾ ನೈಟ್ ರೈಡರ್ಸ್ 4.ಸನ್ರೈಸರ್ಸ್ ಹೈದ್ರಾಬಾದ್
5. ರಾಜಸ್ಥಾನ ರಾಯಲ್ಸ್ 6. ರಾಯಲ್ ಚಾಲೆಂಜರ್ಸ್ ಬೆಂಗಳೂರು
7. ಡೆಲ್ಲಿ ಕ್ಯಾಪಿಟಲ್ಸ್ 8. ಪಂಜಾಬ್ ಕಿಂಗ್ಸ್
9. ಲಕ್ನೋ ಸೂಪರ್ ಜೈಂಟ್ಸ್ 10. ಗುಜರಾತ್ ಟೈಟಾನ್ಸ್
ಒಂದೇ ಗ್ರೂಪ್ನಲ್ಲಿರುವ ತಂಡಗಳು ಎರಡೆರಡು ಬಾರಿ ಮುಖಾಮುಖಿಯಾಗಲಿದೆ. ಅಲ್ಲಿಗೆ ಪ್ರತೀ ತಂಡವೂ 8 ಪಂದ್ಯಗಳನ್ನು ಆಡಿ ಮುಗಿಸಲಿದೆ. ಇನ್ನೊಂದು ಗ್ರೂಪ್ನಲ್ಲಿರುವ 5 ತಂಡಗಳ ವಿರುದ್ಧ 5 ಪಂದ್ಯಗಳನ್ನು ಆಡಲಿದೆ. ಅಲ್ಲಿಗೆ ಪ್ರತೀ ತಂಡ ಆಡುವ ಪಂದ್ಯಗಳ ಸಂಖ್ಯೆ 13 ಆಗುತ್ತದೆ. ಆದರೆ ಗ್ರೂಪ್ ಹಂತದಲ್ಲಿ ಸಮಾನಾಂತರವಾಗಿರುವ ತಂಡಗಳು 2 ಬಾರಿ ಮುಖಾಮುಖಿ ಆಗುತ್ತವೆ. ಅಲ್ಲಿಗೆ ಪ್ರತೀ ತಂಡಗಳು 14 ಪಂದ್ಯಗಳನ್ನು ಆಡಿದಂತಾಗುತ್ತದೆ.
ಉದಾಹಣೆರಣೆಗೆ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 2 ಬಾರಿ ಸಿಎಸ್ಕೆ ತಂಡವನ್ನು ಎದುರಿಸಲಿದೆ. ಅದೇ ರೀತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ಬಾರಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಸನ್ ರೈಸರ್ಸ್ ವಿರುದ್ಧ 2 ಪಂದ್ಯ ಆಡಿದರೆ, ಡೆಲ್ಲಿ ಕ್ಯಾಪಿಟಲ್ಸ್ ಮತ್ತುಪಂಜಾಬ್ ಕಿಂಗ್ಸ್ 2 ಬಾರಿ ಮುಖಾಮುಖಿ ಆಗಲಿದೆ. ಹೊಸ ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಕೂಡ 2 ಬಾರಿ ಮುಖಾ ಮುಖಿಯಾಗಲಿದೆ.
ಲೀಗ್ ಹಂತದಲ್ಲಿ 70 ಪಂದ್ಯಗಳು ನಡೆಯಲಿವೆ. 10 ತಂಡಗಳು ಒಂದೇ ಅಂಕ ಪಟ್ಟಿಯಲ್ಲಿ ಇರಲಿವೆ. ಅಗ್ರ 4 ತಂಡಗಳು ಪ್ಲೇ ಆಫ್ ಪ್ರವೇಶಿಸಲಿವೆ. 2 ಕ್ವಾಲಿಫೈಯರ್, ಎಲಿಮಿನೇಟರ್ ಮತ್ತು ಫೈನಲ್ ಸೇರಿ 15ನೇ ಆವೃತ್ತಿಯಲ್ಲಿ 74 ಪಂದ್ಯಗಳು ನಡೆಯದೆ.