IPL 2022- ಆರ್ ಸಿಬಿ ನಾಯಕನ ಘೋಷಣೆ ಯಾವಾಗ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು..! ಐಪಿಎಲ್ ಟೂರ್ನಿಯ ಅತ್ಯಂತ ಜನಪ್ರಿಯ ತಂಡ. ಆದ್ರೆ ಕಪ್ ಮಾತ್ರ ಇನ್ನೂ ಗೆದ್ದಿಲ್ಲ. ಆದ್ರೂ ಮೂರು ಬಾರಿ ಫೈನಲ್ ಪ್ರವೇಸಿಸಿದ್ದ ಹಿರಿಮೆ ಇದೆ ಎಂಬುದೇ ಸಮಾಧಾನ. ಹಾಗೇ ನೋಡಿದ್ರೆ ಆರ್ ಸಿಬಿ ತಂಡ ಆರಂಭದಿಂದಲೇ ಸರಿಯಾದ ಹಾದಿಯಲ್ಲಿ ಸಾಗಲಿಲ್ಲ. ಪ್ರತಿ ಐಪಿಎಲ್ ನಲ್ಲೂ ಒಂದಲ್ಲ ಒಂದು ಸಮಸ್ಯೆ ಕಾಡುತ್ತಲೇ ಇರುತ್ತಿತ್ತು. ಇದರ ನಡುವೆ ಆರ್ ಸಿಬಿಯ ಆಟಗಾರರು ಅದ್ಭುತ ಪ್ರದರ್ಶನವನ್ನು ನೀಡಿ ಅಭಿಮಾನಿಗಳ ಸಿಟ್ಟನ್ನು ಸ್ವಲ್ಪ ಮಟ್ಟಿಗೆ ಕಮ್ಮಿ ಮಾಡಿದ್ರು. ಹೀಗಾಗಿ ಕಪ್ ಗೆಲ್ಲದಿದ್ರೂ ಪರವಾಗಿಲ್ಲ ಅಂತ ಬೆಂಬಲವನ್ನು ನೀಡುತ್ತಲೇ ಬಂದಿದ್ದಾರೆ.
ಇದೀಗ 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಆರ್ ಸಿಬಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಫಾಪ್ ಡು ಪ್ಲೇಸಸ್, ದಿನೇಶ್ ಕಾರ್ತಿಕ್ ಹಿರಿಯ ಆಟಗಾರರು ಮತ್ತು ವನಿಂದು ಹಸರಂಗನಂತ ಪ್ರತಿಭಾನ್ವಿತ ಆಟಗಾರನನ್ನು ದುಬಾರಿ ಬೆಲೆ ನೀಡಿ ಖರೀದಿ ಮಾಡಿದೆ.
ಆದ್ರೆ ಆರ್ ಸಿಬಿಯ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಹಾಗಂತ ನಾಯಕತ್ವದ ವಿಚಾರದಲ್ಲಿ ಆರ್ ಸಿಬಿಗೆ ಸಮಸ್ಯೆ ಏನು ಇಲ್ಲ. ವಿರಾಟ್ ನಾಯಕನ ಹುದ್ದೆ ಬೇಡ ಅಂತಿದ್ದಾರೆ. ಹೀಗಾಗಿ ಗ್ಲೇನ್ ಮ್ಯಾಕ್ಸ್ ವೆಲ್, ಡುಪ್ಲೇಸಸ್ ಮತ್ತು ದಿನೇಶ್ ಕಾರ್ತಿಕ್ ನಾಯಕತ್ವದ ರೇಸ್ ನಲ್ಲಿದ್ದಾರೆ.
ಈಗಾಗಲೇ ಟೀಮ್ ಮ್ಯಾನೇಜ್ ಮೆಂಟ್ ಸಾಕಷ್ಟು ಚರ್ಚೆ ನಡೆಸುತ್ತಿದೆ. ಯಾರನ್ನು ನಾಯಕನನ್ನಾಗಿ ಆಯ್ಕೆ ಮಾಡೋದು ಎಂಬ ಗೊಂದಲವಿದೆ.

ಇನ್ನು ಆರ್ ಸಿಬಿಯ ನಾಯಕತ್ವ ವಹಿಸಿಕೊಳ್ಳುವುದು ದೊಡ್ಡ ಸವಾಲಿನ ಕೆಲಸ. ಕೇವಲ ನಾಯಕನಾಗಿ ಉತ್ತಮ ಪ್ರದರ್ಶನ ನೀಡಿದ್ರೆ ಸಾಕಾಗಲ್ಲ. ಇಡೀ ತಂಡ ಉತ್ತಮ ಪ್ರದರ್ಶನ ನೀಡಬೇಕು. ಇದು ಆರ್ ಸಿಬಿ ಮ್ಯಾನೇಜ್ ಮೆಂಟ್ ನ ಮೆಂಟಾಲಿಟಿ. ಆದ್ರೂ ವಿರಾಟ್ ಕೊಹ್ಲಿ 2013ರಿಂದ 2021ರ ವರೆಗೆ ಆರ್ ಸಿಬಿ ನಾಯಕತ್ವ ವಹಿಸಿದ್ದರು. ಇದಕ್ಕೆ ಇನ್ನೊಂದು ಕಾರಣ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕನಾಗಿದ್ದರು. ಆದ್ರೆ ಈಗ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕನೂ ಅಲ್ಲ. IPL 2022: Why is RCB Taking Their Time in Announcing New Captain?
ಇನ್ನೊಂದೆಡೆ ನಾಯಕತ್ವದ ವಿಚಾರದಲ್ಲಿ ಆರ್ ಸಿಬಿ ಎಡವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ದೂರದೃಷ್ಟಿಯ ಯೋಚನೆ ಇಲ್ಲದೆ ನಾಯಕತ್ವಕ್ಕೆ ಸರಿ ಹೋಗುವಂತಹ ಯುವ ಆಟಗಾರನನ್ನು ಖರೀದಿ ಮಾಡಲು ಆರ್ ಸಿಬಿ ವಿಫಲವಾಗಿದೆ.
ಒಟ್ಟಿನಲ್ಲಿ ಸದ್ಯದಲ್ಲೇ ಆರ್ ಸಿಬಿಯ ನೂತನ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಒಂದು ವೇಳೆ ವಿರಾಟ್ ಕೊಹ್ಲಿಯೇ ಮತ್ತೆ ನಾಯಕನಾದ್ರೂ ಅಚ್ಚರಿ ಏನಿಲ್ಲ..!